ADVERTISEMENT

ಎನ್.ಡಿ.ಎ ಪರೀಕ್ಷೆ; ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:54 IST
Last Updated 12 ಮೇ 2022, 15:54 IST
ಯೋಗೇಶ ಬಿಸನಾಳ
ಯೋಗೇಶ ಬಿಸನಾಳ   

ವಿಜಯಪುರ: ಏಪ್ರಿಲ್‌ನಲ್ಲಿ ನಡೆದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ (ಎನ್.ಡಿ.ಎ) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಎಕ್ಸಲೆಂಟ್ ಪದವಿಪೂರ್ವ ಮಹಾವಿದ್ಯಾಲಯದ ಐವರು ವಿದ್ಯಾರ್ಥಿಗಳು ತೇರ್ಗಡೆಯಾಗುವುದರ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳಾದ ಯೋಗೇಶ ಬಿಸನಾಳ, ಆಕಾಶ ಜಿತ್ತಿ, ಪ್ರಸನ್ನ ತಳವಾರ, ಸಾಜಿದ್ ಹುಸೇನ್ ಪಾಟೀಲ್ ಮತ್ತು ಪ್ರೇಮ ಚವ್ಹಾಣ ಎನ್.ಡಿ.ಎ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಚೆರ್ಮನ್‌ ಬಸವರಾಜ ಕೌಲಗಿ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಸಂಸ್ಥೆಯ ಆಡಳಿತಾದಿಕಾರಿ ಜೆ.ಎಸ್. ಪೂಜೇರಿ, ಪ್ರಾಂಶುಪಾಲರಾದ ಡಿ. ಎಲ್. ಬನಸೊಡೆ, ಪರಶುರಾಮ ಭಾವಿಕಟ್ಟಿ, ಜೆಇಇ ವಿಭಾಗದ ಮುಖ್ಯಸ್ಥ ಪ್ರವೀಣ ಪಾಟೀಲ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.