ಮುದ್ದೇಬಿಹಾಳ: ಧರ್ಮಕ್ಕೆ ಆಚಾರವೇ ಮೂಲ. ಆಚಾರವು ಬೀಜವಾದರೆ ಧರ್ಮವು ಆ ಬೀಜದಿಂದ ಉತ್ಪತ್ತಿಯಾದ ಫಲವಾಗಿದೆ. ಸತ್ಯ, ಅಹಿಂಸೆ ಮುಂತಾದ ಧರ್ಮದ ಎಲ್ಲ ಲಕ್ಷಣಗಳು ಆಚಾರದ ಅಂಗಗಳೇ ಆಗಿವೆ ಎಂದು ಸಾಹಿತಿ ಜಿ.ಎಚ್.ಪಾಟೀಲ ಹೇಳಿದರು.
ತಾಲ್ಲೂಕಿನ ಆಲೂರು ಗ್ರಾಮದ ಶಂಕರಗೌಡ ಹಿರೇಗೌಡರ ಅವರ ಮನೆಯಲ್ಲಿ ಸಜ್ಜಲಶ್ರೀ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ಶರಣ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಲಿಂ.ದೊಡ್ಡಬಸಪ್ಪಗೌಡ ಹಿರೇಗೌಡರ ಹಾಗೂ ಭೀಮಬಾಯಿ ದೊಡ್ಡಬಸಪ್ಪ ಗೌಡ ಹಿರೇಗೌಡರ ಸ್ಮರಣಾರ್ಥ ಬುಧವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದುರ್ಗುಣಗಳನ್ನು ಅಳಿಸಿ ಹಾಕುವುದೇ ಆಚಾರದ ಮುಖ್ಯ ಉದ್ದೇಶವಾಗಿದೆ. ಸತ್ಚಾರಿತ್ರ್ಯ ರೂಢಿಸಿಕೊಂಡರೆ ಉತ್ತಮ ನಾಗರಿಕನಾಗಿ ಪರಿವರ್ತನೆಯಾಗಲು ಸಾಧ್ಯ ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ , ಎಸ್.ಎಸ್.ಪಾಟೀಲ ಮಾತನಾಡಿ, ಬದುಕಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗಬೇಕು’ ಎಂದು ಹೇಳಿದರು.
ವೇ.ಗದಗಯ್ಯ ಹಿರೇಮಠ ,ವೇ.ಸಂಗಯ್ಯ ಹಿರೇಮಠ, ಗುರಲಿಂಗಪ್ಪಗೌಡ ಹಿರೇಗೌಡರ, ದತ್ತಿದಾನಿಗಳಾದ ಶಂಕರಗೌಡ ಹಿರೇಗೌಡರ , ಕೆ.ಎಸ್.ಗೂಳಿ, ಎಸ್.ಆರ್.ಗೌಡರ, ಎಂ.ಎಸ್.ಬಿರಾದಾರ, ಎಸ್.ಎಚ್.ಪಾಟೀಲ, ಎಂ.ಆರ್.ಬೆಳಗಲ್, ಹಿರೇಗೌಡರ ಕುಟುಂಬದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.