ವಿಜಯಪುರ: ಮಹಾಭಾರತ, ರಾಮಾಯಣ ಮತ್ತು ಭಾಗವತದ ಹಲವಾರು ಶ್ಲೋಕಗಳನ್ನು ಕಂಠಪಾಠ ಮಾಡಿ ಪಠಿಸುವ ಮೂಲಕ ನಗರದ ವಿಯಾಂಶ ದೇಶಪಾಂಡೆ ಎಂಬ ಬಾಲಕ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದಾನೆ.
ವಿಜಯಪುರದ ಹರ್ಷ ದೇಶಪಾಂಡೆ, ಶೀತಲ್ ದೇಶಪಾಂಡೆ ದಂಒತಿಯ ಪುತ್ರನಾದ ವಿಯಾಂಶಗೆ ಸದ್ಯ ಐದು ವರ್ಷ ಆರು ತಿಂಗಳು. ಒಂದೇ ನಿಮಿಷದಲ್ಲಿ ಆರು ಶ್ಲೋಕಗಳನ್ನು ಪಠಿಸಿ ದಾಖಲೆ ನಿರ್ಮಿಸಿದ್ದಾನೆ.
ಕಳೆದ ಬಾರಿ ಆರು ವರ್ಷ ನಾಲ್ಕು ತಿಂಗಳ ಮಗು ಒಂದು ನಿಮಿಷದಲ್ಲಿ ಐದು ಸಂಸ್ಕೃತ ಶ್ಲೋಕಗಳನ್ನು ಹೇಳಿ ವಿಶ್ವ ದಾಖಲೆ ಮಾಡಿತ್ತು. ಈಗ ವಿಯಾಂಶನು ಈ ದಾಖಲೆಯನ್ನು ಮುರಿದು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಸಾಧನೆಯನ್ನು ದಾಖಲಿಸಿದ್ದಾನೆ ಎಂದು ನಗರದ ಚಿನ್ಮಯ ಶಾಲೆಯ ಆಡಳಿತಾಧಿಕಾರಿ ವಿಜಯಕುಮಾರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.