ADVERTISEMENT

ಹೋರಾಟ ಶೋಷಿತರ ನೆಲೆಯಾಗಲಿ: ರಂಜಾನ ಕಡಿವಾಲ

​ಪ್ರಜಾವಾಣಿ ವಾರ್ತೆ
Published 23 ಮೇ 2025, 14:12 IST
Last Updated 23 ಮೇ 2025, 14:12 IST
ಮುದ್ದೇಬಿಹಾಳ ಪಟ್ಟಣದ ಬೆಂಗಳೂರು ಬೇಕರಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್‌ಡಿಪಿಐ ಕಾರ್ಯಕರ್ತರ ಸಭೆಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಲ ಮಾತನಾಡಿದರು
ಮುದ್ದೇಬಿಹಾಳ ಪಟ್ಟಣದ ಬೆಂಗಳೂರು ಬೇಕರಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್‌ಡಿಪಿಐ ಕಾರ್ಯಕರ್ತರ ಸಭೆಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಲ ಮಾತನಾಡಿದರು   

ಮುದ್ದೇಬಿಹಾಳ: ಎಸ್‌ಡಿಪಿಐ ಅಂದರೆ ಕೇವಲ ರಾಜಕೀಯ ಪಕ್ಷವಲ್ಲ. ಅದೊಂದು ನ್ಯಾಯ, ಸಮಾನತೆ, ಶಿಸ್ತಿನ ಹಾದಿಯಲ್ಲಿ ನಡೆಯುವ ಚಳವಳಿಯಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಂಜಾನ ಕಡಿವಾಲ ಹೇಳಿದರು.

ಪಟ್ಟಣದ ಬೆಂಗಳೂರು ಬೇಕರಿ ಸಭಾಂಗಣದಲ್ಲಿ ದಿಟ್ಟ ನಾಯಕತ್ವ-ಬಲಿಷ್ಠ ಕಾರ್ಯಕರ್ತ ಆಶಯದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಎಸ್‌ಡಿಪಿಐ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ಹೋರಾಟ ಶೋಷಿತರ ನೆಲೆಯಾಗಬೇಕು, ದಲಿತರ ಕನಸುಗಳ ರೂಪವಾಗಬೇಕು, ಬಡವರ ಶಕ್ತಿಯಾಗಿ ಬೆಳಗಬೇಕು’ ಎಂದರು.

ADVERTISEMENT

‘ನಾಯಕತ್ವ ಹುದ್ದೆಗೆ ಸೀಮಿತವಲ್ಲ. ನೈತಿಕತೆ, ಶ್ರದ್ಧೆ, ಶಿಸ್ತಿನಿಂದ ಕಾರ್ಯಕರ್ತರಲ್ಲಿ ಸ್ಪೂರ್ತಿ ಮೂಡಿಸಬಲ್ಲ ಶಕ್ತಿ ಆಗಬೇಕು. ನಂಬಿಕೆ, ಸೇವೆ ಮತ್ತು ಸಮರ್ಪಣೆಯೊಂದಿಗೆ ನಾವು ಬದಲಾವಣೆ ತರಬಹುದು’ ಎಂದು ಹೇಳಿದರು.

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸಮೀರ ಹುಣಚಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಸಾರ ಅಹ್ಮದ್ ಮನಿಯಾರ್, ಜಿಲ್ಲಾ ಸಮಿತಿ ಸದಸ್ಯರು ಏಜಾಜ್ ಮನಿಯಾರ್, ಸದ್ದಾಂ ನದಾಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.