ದೇವರಹಿಪ್ಪರಗಿ: ಶಂಕರಾಚಾರ್ಯರು ಅದ್ವೈತ ವೇದಾಂತದ ಮೂಲಕ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದ ಶ್ರೇಷ್ಠ ಆಧ್ಯಾತ್ಮೀಕ ಸಂತ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪಿ.ಬಿರಾದಾರ ಹೇಳಿದರು.
ತಾಲ್ಲೂಕು ಆಡಳಿತದಿಂದ ಶುಕ್ರವಾರ ಜರುಗಿದ ಶಂಕರಾಚಾರ್ಯರ 1237ನೇ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾಂಸ್ಕೃತಿಕ ಮತ್ತು ಧಾರ್ಮಿಕ ಅವನತಿಯ ಸಮಯದಲ್ಲಿ ಹಿಂದೂ ಧರ್ಮದ ಆಶಾಕಿರಣವಾಗಿ ನಿರ್ಣಾಯಕ ಪಾತ್ರ ವಹಿಸಿದ ಶಂಕರಾಚಾರ್ಯರು ಭಾರತೀಯ ತತ್ವಶಾಸ್ತ್ರದ ಶ್ರೇಷ್ಠ ವ್ಯಕ್ತಿಯಾಗಿದ್ದರು ಎಂದರು.
ಶಿಕ್ಷಕ ಪ್ರಲ್ಹಾದ ಕುಲಕರ್ಣಿ ಶಂಕರರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಪ್ರಕಾಶ ಸಿಂದಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಿರಸ್ತೇದಾರ್ ಸುರೇಶ ಮ್ಯಾಗೇರಿ, ಶಿಕ್ಷಕ ಬಸವರಾಜ ಬಡಿಗೇರ, ಪಾಂಡುರಂಗ ದೇಶಪಾಂಡೆ, ವೆಂಕಟೇಶ ಕುಲಕರ್ಣಿ, ನರೇಂದ್ರ ನಾಡಗೌಡ, ಗುರುರಾಜ ಕುಲಕರ್ಣಿ, ಪಿ.ಆರ್.ಕುಲಕರ್ಣಿ, ಶ್ರೀಧರ ನಾಡಗೌಡ, ಸುಧೀರ ಕುಲಕರ್ಣಿ, ಪ್ರವೀಣ ಕುಲಕರ್ಣಿ ಸಿಬ್ಬಂದಿ ಚನ್ನಬಸು ಹೊಸಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.