ADVERTISEMENT

ಸೋಲಾಪುರ: ವಿಶೇಷ ರೈಲುಗಳ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:26 IST
Last Updated 24 ಜೂನ್ 2025, 16:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸೋಲಾಪುರ: ಪ್ರಯಾಣಿಕರ ಜನದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ಮಧ್ಯ ರೈಲು ಸೋಲಾಪುರ ವಿಭಾಗದಿಂದ ಸಂಚರಿಸುವ ವಿಶೇಷ ರೈಲುಗಳ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ರೈಲ್ವೆ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಸೋಲಾಪುರ - ಲೋಕಮಾನ್ಯ ಟಿಳಕ ಟರ್ಮಿನಸ್ ಮುಂಬಯಿ -ಸೋಲಾಪುರ ಸಾಪ್ತಾಹಿಕ ವಿಶೇಷ ರೈಲು (01435/01436) ಸೆಪ್ಟಂಬರ್ 30ರ ವರೆಗೆ ಸಂಚರಿಸಲಿದೆ.

ADVERTISEMENT

ಸೋಲಾಪುರ- ದೌಂಡ-ಸೋಲಾಪುರ (01461/01462), ಸೋಲಾಪುರ- ಕಲಬುರ್ಗಿ-ಸೋಲಾಪುರ (01465/01466) ನಿತ್ಯವೂ ಸಂಚರಿಸುವ ವಿಶೇಷ ರೈಲುಗಳ ಅವಧಿಯನ್ನು ಸೆಪ್ಟಂಬರ್ 30ರ ವರೆಗೆ ವಿಸ್ತರಿಸಿದೆ ಎಂದು ಮಧ್ಯ ರೈಲು ಸೋಲಾಪುರ ವಿಭಾಗದ ಜನ ಸಂಪರ್ಕ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.