ತಾಳಿಕೋಟೆ ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐ. ಕ್ಯೂ.ಎ.ಸಿ. ಘಟಕದ ಅಡಿಯಲ್ಲಿ 5ಇ ಆಧಾರಿತ ಪಾಠ ಯೋಜನೆ ಕುರಿತು ಹಮ್ಮಿಕೊಂಡ ನಾಲ್ಕು ದಿನಗಳ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಂ.ಬಂಟನೂರ ಮಂಗಳವಾರ ಮಾತನಾಡಿದರು
ತಾಳಿಕೋಟೆ: ಕಲಿಕೆಯ ಐದು ರಚನಾತ್ಮಕ ಹಂತಗಳನ್ನು ಒಳಗೊಂಡಿರುವ 5ಇ ವಿಧಾನದಲ್ಲಿ ತೊಡಗಿಸಿಕೊಳ್ಳುವಿಕೆ, ಅನ್ವೇಷಿಸುವಿಕೆಸ, ವಿವರಿಸುವಿಕೆ, ವಿಸ್ತರಿಸುವಿಕೆ, ಮತ್ತು ಮೌಲ್ಯಮಾಪನಕ್ಕೆ ಅವಕಾಶ ಇರುವುದರಿಂದ ಪರಿಣಾಮಕಾರಿ ಬೋಧನೆಯಾಗುತ್ತದೆ ಎಂದು ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಂ.ಬಂಟನೂರ ಹೇಳಿದರು.
ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐ. ಕ್ಯೂ.ಎ.ಸಿ. ಘಟಕದ ಅಡಿಯಲ್ಲಿ 5ಇ ಆಧಾರಿತ ಪಾಠ ಯೋಜನೆ ಕುರಿತು ಹಮ್ಮಿಕೊಂಡ ನಾಲ್ಕು ದಿನಗಳ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಕಾರ್ಯಗಾರವನ್ನು ಉದ್ಘಾಟಿಸಿ ಅಜೀಂ ಪ್ರೇಮಜಿ ಫೌಂಡೇಶನ್‌ದ ಚೇತನ್ ಹಿರೇಮಠ ಮಾತನಾಡಿ, ಹಣೆಬರಹವನ್ನು ನಂಬಿ ಕುಳಿತರೆ ಏನೂ ಸಾಧನೆಯಾಗದು, ನಮ್ಮ ಪ್ರಯತ್ನಗಳಿಂದ ಮಾತ್ರ ಯಶ ಸಾಧ್ಯವಿದೆ. ಕಲಿಕೆಯನ್ನು ಹೆಚ್ಚು ರೂಡಿಗತ ಮಾಡಿಕೊಂಡರೆ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಐಕ್ಯೂಎ.ಸಿ ಸಂಘಟಕ ಯು. ಎನ್. ಮಂಗೊಂಡ, 5ಈ ಪಾಠ ಯೋಜನಾ ಕಾರ್ಯಾಗಾರ ಸಂಘಟಕ ವೈ.ಎಚ್. ಅಂಗಡಿಗೇರಿ, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪಾರ್ವತಿ ಸಂಗಡಿಗರು ಪ್ರಾರ್ಥಿಸಿದರು. ರೇಷ್ಮಾ ಚಲವಾದಿ ಸ್ವಾಗತಿಸಿದರು. ಕೀರ್ತಿ ನಿರೂಪಿಸಿದರು. ಐಶ್ವರ್ಯ ದೊಡಮನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.