ನಾಲತವಾಡ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗದ ನಾಲತವಾಡದ ಗೆಳೆಯರ ಬಳಗದ ವತಿಯಿಂದ ನಿವೃತ್ತರಾದ ಚಾಲಕ ಹಾಗೂ ನಿರ್ವಾಹಕರು, ಪದೋನ್ನತಿ ಪಡೆದ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ನಿವೃತ್ತ ನಿರ್ವಾಹಕ ಮುತ್ತು ಸ್ಥಾವರಮಠ ಮಾತನಾಡಿ, ‘ಪಟ್ಟಣದ ಜನತೆ ಹಲವಾರು ವರ್ಷಗಳಿಂದ ಮಿನಿ ಬಸ್ ಡಿಪೊ ಸ್ಥಾಪನೆಯ ನಿರೀಕ್ಷೆಯಲ್ಲಿದ್ದಾರೆ. ಶಾಸಕರು ಮತ್ತು ಸಂಬಂಧಿತ ಅಧಿಕಾರಿಗಳಿಗೆ ಈ ಕುರಿತು ಹಲವು ಮನವಿ ಸಲ್ಲಿಸಲಾಗಿದೆ. ಪಟ್ಟಣ ಜಿಲ್ಲೆಯ ಕೊನೆಯ ಭಾಗದಲ್ಲಿರುವುದರಿಂದ ಇಲ್ಲಿಗೆ ಸಾರಿಗೆ ಸೌಲಭ್ಯ ಅಗತ್ಯವಾಗಿದೆ. ಯಾದಗಿರಿ, ರಾಯಚೂರು ಜಿಲ್ಲೆಗಳ ಸಂಪರ್ಕದ ದೃಷ್ಟಿಯಿಂದ ನಾಲತವಾಡ ಕೇಂದ್ರ ಸ್ಥಾನ ಹೊಂದಿದ್ದು, ಮಿನಿ ಡಿಪೊ ಪ್ರಾರಂಭ ಮಾಡಬೇಕು’ ಎಂದು ಹೇಳಿದರು.
ಸನ್ಮಾನ: ನಿವೃತ್ತರಾದ ಸಾರಿಗೆ ಸಿಬ್ಬಂದಿ ವೈ.ಬಿ.ಹಟ್ಟಿ, ಎಂ.ಎಸ್.ಹೋಗಾರ, ಕೆ.ಐ.ಅವಟಿ, ಬೈಲಪ್ಪ ಹಿಂದಿನಮನಿ ಹಾಗೂ ಸೇವೆಯಿಂದ ಪದೋನ್ನತಿ ಹೊಂದಿದ ರಾಚಯ್ಯ ಕಪ್ಪರದ, ಚಂದ್ರಶೇಖರ ವಾಲಿಶಟ್ಟಿ, ಡಿ.ಜಿ.ಡಂಬಳ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅಥಿತಿಗಳಾಗಿ ನಂದಪ್ಪ ಗಂಗನಗೌಡರ, ಶರಣಪ್ಪ ಬಿದರಕುಂದಿ, ಗಿರೀಶ ಕ್ಷತ್ರಿ, ಡಿ.ಎಸ್. ಬಿಳೇಭಾವಿ, ಬಸವರಾಜ ಹಾವರಗಿ ಇದ್ದರು. ಸುರೇಶ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕರಿಭಾವಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.