ಕೊಲ್ಹಾರ: ತಾಲ್ಲೂಕಿನ ಕವಲಗಿಯಲ್ಲಿ ಧನುರ್ವಾಯು ಹಾಗೂ ಗಂಟಲುಮಾರಿ ರಾಷ್ಟ್ರೀಯ ಚುಚ್ಚು ಮದ್ದು ಲಸಿಕೆ ಕಾರ್ಯಕ್ರಮದಲ್ಲಿ ತೆಲಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕವಲಗಿಯ ಮಕ್ಕಳಿಗೆ ಲಸಿಕೆ ಹಾಕಲಾಯಿತು.
ಸಮುದಾಯ ಆರೋಗ್ಯ ಅಧಿಕಾರಿ ಶರಣಬಸು ಗುದ್ದಿ ಮಾತನಾಡಿ, 1 ಮತ್ತು 5ನೇ ತರಗತಿಯ ಮಕ್ಕಳಿಗೆ ಡಿಪಿಟಿ ಹಾಗೂ ಟಿಡಿ ಲಸಿಕೆ ನೀಡುವ ಮುಖಾಂತರ ಮಾರಣಾಂತಿಕ ಕಾಯಿಲೆಗಳಾದ ಧನುರ್ವಾಯು, ಗಂಟಲುಮಾರಿ ಹಾಗೂ ದಡಾರ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಬಹುದು ಹಾಗೂ ಮಕ್ಕಳ ಪೋಷಕರು ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಮರೆತು ತಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಶಾರದಾ ಗಿಡಜಾಡರ ಮಾತನಾಡಿ, ಲಸಿಕೆಗಳ ಬಗ್ಗೆ ಇರುವ ಭಯ ಮತ್ತು ತಪ್ಪು ಕಲ್ಪನೆಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಅರಿವು ಮೂಡಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಪಿ.ಎಚ್. ದೇನಕ್ಕನವರ, ಎಸ್‌ಡಿಎಂಸಿ ಅಧ್ಯಕ್ಷ ವೈ.ಎಸ್. ನಿಡಗುಂದಿ, ಸಹಶಿಕ್ಷಕ ಎ.ಬಿ. ಅರಳದಿನ್ನಿ, ಎಸ್.ಬಿ. ನಾಗಠಾಣ, ಎಂ.ಎಸ್. ದಾಸ್ಯಾಳ, ಅತಿಥಿ ಶಿಕ್ಷಕರಾದ ಮಂಜುನಾಥ, ದಳವಾಯಿ ಮತ್ತು ಅನಿಲಕುಮಾರ ತಳವಾರ ಹಾಗೂ ಆಶಾ ಕಾರ್ಯಕರ್ತರಾದ ಎಂ.ಎಂ. ಜಾರಡ್ಡಿ, ಪಿ.ಎಚ್. ಚೀರಲದಿನ್ನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.