ADVERTISEMENT

ವಿಜಯಪುರ | ಜೋಡಿ ಕೊಲೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 16:18 IST
Last Updated 23 ಮಾರ್ಚ್ 2024, 16:18 IST

ವಿಜಯಪುರ: ನಿಡಗುಂದಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆಕಳವಾಡಿ ಬಳಿ ಕಳೆದ ಸೋಮವಾರ (ಮಾರ್ಚ್‌ 18) ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಗಣಿ ಗ್ರಾಮದ ಪಾರ್ವತವ್ವ ತಳವಾರ ಮತ್ತು ಸೋಮನಿಂಗಪ್ಪ ಕುಂಬಾರ ಎಂಬುವವರನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ ಕಾಲುವೆಯಲ್ಲಿ ಎಸೆದು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಮಹಿಳೆಯ ಮಗ ಲಕ್ಷ್ಮಣ ತಳವಾರ ಹಾಗೂ ಕೊಲೆಗೆ ಸಹಕರಿಸಿದ ಆರೋಪಿ ಲಕ್ಷ್ಮಣನ ಸ್ನೇಹಿತರಾದ ಶಶಿಕುಮಾರ ಮಣಗೂರ ಮತ್ತು ಬಸವರಾಜ ಹಡಪದ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಯಿಯ ಅನೈತಿಕ ಸಂಬಂಧದಿಂದ ಬೇಸತ್ತು ಸ್ನೇಹಿತರೊಡಗೂಡಿ ಕೊಲೆ ಮಾಡಿರುವುದಾಗಿ ಆರೋಪಿ ಲಕ್ಷ್ಮಣ ತಳವಾರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.