ADVERTISEMENT

ಮುದ್ದೇಬಿಹಾಳ: ಗ್ರಾಮದೇವತೆ ಜಾತ್ರೋತ್ಸವ 30 ರಿಂದ

​ಪ್ರಜಾವಾಣಿ ವಾರ್ತೆ
Published 19 ಮೇ 2025, 14:37 IST
Last Updated 19 ಮೇ 2025, 14:37 IST
ಮುದ್ದೇಬಿಹಾಳ ಪಟ್ಟಣದ ಬಜಾರ್ ಹನುಮಾನ ದೇವಸ್ಥಾನದಲ್ಲಿ ಸೋಮವಾರ ಮುದ್ದೇಬಿಹಾಳ ಗ್ರಾಮದೇವತೆ ಜಾತ್ರೆಯ ಭಿತ್ತಿಪತ್ರಗಳನ್ನು ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಬಿಡುಗಡೆ ಮಾಡಿದರು. ಪುರಸಭೆ ಸದಸ್ಯರು,ಊರಿನ ಗಣ್ಯರು,ಜಾತ್ರಾ ಸಮಿತಿ ಪದಾಧಿಕಾರಿಗಳು ಇದ್ದರು
ಮುದ್ದೇಬಿಹಾಳ ಪಟ್ಟಣದ ಬಜಾರ್ ಹನುಮಾನ ದೇವಸ್ಥಾನದಲ್ಲಿ ಸೋಮವಾರ ಮುದ್ದೇಬಿಹಾಳ ಗ್ರಾಮದೇವತೆ ಜಾತ್ರೆಯ ಭಿತ್ತಿಪತ್ರಗಳನ್ನು ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಬಿಡುಗಡೆ ಮಾಡಿದರು. ಪುರಸಭೆ ಸದಸ್ಯರು,ಊರಿನ ಗಣ್ಯರು,ಜಾತ್ರಾ ಸಮಿತಿ ಪದಾಧಿಕಾರಿಗಳು ಇದ್ದರು   

ಮುದ್ದೇಬಿಹಾಳ: ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ(ದ್ಯಾಮವ್ವ ದೇವಿ) ಜಾತ್ರಾ ಮಹೋತ್ಸವ ಮೇ 30 ರಿಂದ ಜೂನ್‌ 3ರವರೆಗೆ ನಡೆಯಲಿದ್ದು ನಾನಾ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಬಜಾರ್ ಹನುಮಾನ ದೇವಸ್ಥಾನದಲ್ಲಿ ಸೋಮವಾರ ಸಂಜೆ ಜಾತ್ರಾ ಮಹೋತ್ಸವದ ಭಿತ್ತಿಪತ್ರ ಹಾಗೂ ವಾಹನಗಳಿಗೆ ಅಂಟಿಸುವ ಸ್ಟಿಕ್ಕರ್ ಬಿಡುಗಡೆ ಮಾಡಲಾಯಿತು. ಈ ವೇಳೆ ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿ, ಜಾತ್ರೆಯನ್ನು ಎಲ್ಲರೂ ಒಗ್ಗೂಡಿ ಮಾಡೋಣ ಎಂದು ಹೇಳಿದರು.

ಜಾತ್ರೆಯಲ್ಲಿ ಏನಿದೆ ಏನಿಲ್ಲ :

ADVERTISEMENT

30 ರಂದು ಗ್ರಾಮದೇವತೆ ಹಾಗೂ ಶಾರದಾ ದೇವಿ ಭವ್ಯ ಮೆರವಣಿಗೆ, ಸಂಜೆ 6.30ಕ್ಕೆ ಸಾಂಸ್ಕೃತಿಕ ಉತ್ಸವದ ಉದ್ಘಾಟನೆ, ರಾತ್ರಿ 11ಕ್ಕೆ ಸೈನಿಕ ಮೈದಾನದಲ್ಲಿ ವಾದಿ ಪ್ರತಿವಾದಿ ಡೊಳ್ಳಿನ ಹಾಡಿಕೆ ಕಾರ್ಯಕ್ರಮ ಜರುಗುವುದು.

31 ರಂದು ಸೈನಿಕ ಮೈದಾನದಲ್ಲಿ ವಾದಿ ಪ್ರತಿವಾದಿ ಗೀಗೀ ಪದಗಳು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ನಾಲ್ಕು ದಿನ ನಡೆಯಲಿದೆ.  ಬೆಳಗ್ಗೆ 10 ಕ್ಕೆ ನಾಲತವಾಡ ರಸ್ತೆಯಲ್ಲಿ ಹೊಲದಲ್ಲಿ ಪುಟ್ಟಿಗಾಡಿ ಸ್ಪರ್ಧೆ, ಮಧ್ಯಾಹ್ನ 2ಕ್ಕೆ ಎತ್ತಿನ ಕೂಡುಗಾಡಿಗಳ ಓಟದ ಸ್ಪರ್ಧೆ, ರಾತ್ರಿ 8ಕ್ಕೆ ಜಾನಪದ ಜಾತ್ರೆ ಬಿಡಿಒ ಕ್ವಾರ್ಟರ್ಸ್ನಲ್ಲಿ ನಡೆಯಲಿದೆ.

ಜೂನ್ 1 ರಂದು ಮಧ್ಯಾಹ್ನ 12ಕ್ಕೆ ರಾಜ್ಯಮಟ್ಟದ ತೆರಬಂಡಿ ಸ್ಪರ್ಧೆ,ಮಧ್ಯಾಹ್ನ 3ಕ್ಕೆ ಜಂಗೀ ನಿಕಾಲಿ ಕುಸ್ತಿಗಳು,ಸಂಜೆ 7ಕ್ಕೆ ಮದ್ದು ಸುಡುವ ಹಾಗೂ ಟ್ರಾಕ್ಟರ್ ರಿವರ್ಸ್ ಸ್ಪರ್ಧೆ, ರಾತ್ರಿ 8ಕ್ಕೆ ನಗೆ ಹಬ್ಬ ನಡೆಯಲಿದೆ.

ಜೂನ್ 2 ರಂದು ಬೆಳಗ್ಗೆ 10ಕ್ಕೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ,10.15 ಕ್ಕೆ ನಿಧಾನ ಬೈಕ್ ರೇಸ್ ಸ್ಪರ್ಧೆ, 10.30ಕ್ಕೆ ಟಗರಿನ ಕಾಳಗ, 3ಕ್ಕೆ ಜಂಗೀ ನಿಕಾಲಿ ಕುಸ್ತಿಗಳು, ಸಂಜೆ 7.30ಕ್ಕೆ ಸಂಗೀತ ರಸಮಂಜರಿ ಕಾರ್ಯಕ್ರಮ, 8ಕ್ಕೆ ಜಾನಪದ ಜಾತ್ರೆ ನಡೆಯಲಿದೆ. ಜೂ.3 ರಂದು ಬೆಳಗ್ಗೆ 9ಕ್ಕೆ ಭಾರ ಎತ್ತುವ ಸ್ಪರ್ಧೆ, 4ಕ್ಕೆ ಗ್ರಾಮದೇವತೆ, ಶಾರದಾ ದೇವಿಯರನ್ನು ಮೂಲಸ್ಥಳಕ್ಕೆ ಕರೆದೊಯ್ಯುವುದು.ರಾತ್ರಿ 8 ಗಂಟೆಗೆ ಸಂಗೀತ ರಸಮಂಜರಿ ನಡೆಯಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆ ತಿಳಿಸಿದೆ.
 
ರಂಗಭೂಮಿ ಕಲೆಗೆ ಕೊಕ್ : ಐದು ದಿನಗಳ ಜಾತ್ರೆಯಲ್ಲಿ ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಾತ್ರಾ ಕಮಿಟಿಯವರು ಸಾಂಪ್ರದಾಯಿಕ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸದೇ ಇರುವುದು ರಂಗಭೂಮಿ ಕಲಾವಿದರ ಬೇಸರಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.