ADVERTISEMENT

ಯಶವಂತಪುರ -ವಿಜಯಪುರ ರೈಲು: ಹೆಚ್ಚುವರಿ ಬೋಗಿ ಜೋಡಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 12:47 IST
Last Updated 11 ಮಾರ್ಚ್ 2023, 12:47 IST
ರೈಲು (ಸಾಂದರ್ಭಿಕ ಚಿತ್ರ)
ರೈಲು (ಸಾಂದರ್ಭಿಕ ಚಿತ್ರ)   

ವಿಜಯಪುರ: ಮಾರ್ಚ್ 13 ರಿಂದ ಜಾರಿಗೆ ಬರುವಂತೆ ಯಶವಂತಪುರ -ವಿಜಯಪುರ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್(06545) ರೈಲಿನ ಸೆಕೆಂಡ್‌ ಕ್ಲಾಸ್‌ಗೆ ಎರಡು ಸಿಟ್ಟಿಂಗ್ ಬೋಗಿಗಳನ್ನು ಶಾಶ್ವತವಾಗಿ ಜೋಡಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಮಾರ್ಚ್ 14 ರಿಂದ ಜಾರಿಗೆ ಬರುವಂತೆ ವಿಜಯಪುರ - ಯಶವಂತಪುರ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್(06546) ರೈಲಿಗೆ ಸೆಕೆಂಡ್‌ ಕ್ಲಾಸ್‌ಗೆ ಎರಡು ಸಿಟ್ಟಿಂಗ್ ಬೋಗಿಗಳನ್ನು ಶಾಶ್ವತವಾಗಿ ಜೋಡಿಸಲಾಗುತ್ತದೆ.

ಮಾರ್ಚ್ 20 ರಿಂದ ಜಾರಿಗೆ ಬರುವಂತೆ ಯಶವಂತಪುರ - ವಿಜಯಪುರ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್(06545) ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಶಾಶ್ವತವಾಗಿ ಜೋಡಿಸಲಾಗುತ್ತದೆ.

ADVERTISEMENT

ಮಾರ್ಚ್ 21 ರಿಂದ ಜಾರಿಗೆ ಬರುವಂತೆ ವಿಜಯಪುರ - ಯಶವಂತಪುರ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್( 06546) ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಶಾಶ್ವತವಾಗಿ ಜೋಡಿಸಲಾಗುತ್ತಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹುಬ್ಬಳ್ಳಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.