ADVERTISEMENT

ಅಫಜಲಪುರ ತಾಪಂ ಬಿಜೆಪಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 6:00 IST
Last Updated 16 ಅಕ್ಟೋಬರ್ 2012, 6:00 IST

ಅಫಜಲಪುರ: ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರಾಗಿ ಚವಡಾಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯೆ ಶಾರದಾಬಾಯಿ ಯಲ್ಲಪ್ಪ ಗಂಡೋಳಿ, ಉಪಾಧ್ಯಕ್ಷರಾಗಿ ಹಸರಗುಂಡಗಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯ ಗಂಗಾಬಾಯಿ ಬಾಬುರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿಯ  2ನೇ ಅವಧಿಗೆ (20 ತಿಂಗಳು) ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಹಿಂದೂಳಿದ ವರ್ಗ ಮಹಿಳೆ ಸ್ಥಾನಕ್ಕೆ ಮೀಸಲಾಗಿತ್ತು. ಸಹಾಯಕ ಆಯುಕ್ತ ಹರ್ಷಾ ಶೆಟ್ಟಿ ಚುನಾವಣಾಧಿಕಾರಿಯಾಗಿದ್ದರು. 

 ಒಟ್ಟು 17 ಜನ ಸದಸ್ಯರಿರುವ ತಾಲ್ಲೂಕು ಪಂಚಾಯಿತಿಯಲ್ಲಿ 10 ಜನ ಮಹಿಳಾ ಸದಸ್ಯರಿದ್ದರೆ, 7 ಜನ ಪುರುಷ ಸದಸ್ಯರಿದ್ದಾರೆ. ಅವರಲ್ಲಿ 12 ಜನ ಬಿಜೆಪಿ ಸದಸ್ಯರಿದ್ದರೆ, 7 ಮಂದಿ ಕಾಂಗ್ರೆಸ್ ಸದಸ್ಯರು.   ಅಧ್ಯಕ್ಷ ಸ್ಥಾನಕ್ಕೆ ಚವಡಾಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯೆ ಶಾರದಾಬಾಯಿ ಯಲ್ಲಪ್ಪ ಗಂಡೋಳಿ, ಉಪಾಧ್ಯಕ್ಷ ಸ್ಥಾನಕ್ಕೆ ಹಸರಗುಂಡಗಿ ತಾಲ್ಲೂಕು ಪಂಚಾಯಿತಿ ಮತ ಕ್ಷೇತ್ರದ ಬಿಜೆಪಿ ಸದಸ್ಯೆ ಗಂಗಬಾಯಿ ಬಾಬುರಾವ್ ನಾಮ ಪತ್ರ ಸಲ್ಲಿಸಿದರು.

ಬೇರೆಯವರಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನುವಣೆ ನಡೆಯದೇ ಅವರಿಬ್ಬರೂ ಅವಿರೋಧವಾಗಿ ಆಯ್ಕೆಯಾದರು. 

ವಿಜಯೋತ್ಸವ: ತಾ.ಪಂ ಅಧ್ಯಕ್ಷರಾಗಿ ಶಾರದಾಬಾಯಿ ಹಾಗೂ ಉಪಾಧ್ಯಕ್ಷರಾಗಿ ಗಂಗಾಬಾಯಿ ಅವಿರೋಧ ಆಯ್ಕೆ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿ ಮುಖಂಡರು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.  ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ, ಜಿ.ಪಂ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡದ, ಮತೀನ

ಪಟೇಲ ಮತ್ತು ತಾ.ಪಂ ಮಾಜಿ ಅಧ್ಯಕ್ಷ್ಯೆ ಸುಜ್ಞಾನಿಬಾಯಿ ಪಾಟೀಲ, ಕಾಶೀಬಾಯಿ ನಾಮಗೊಂಡ, ಮಾಜಿ ಉಪಾಧ್ಯಕ್ಷರಾದ ಶಿವಾನಂದ ಗಾಡಿಸಾಹುಕಾರ ಸದಸ್ಯರಾದ ಅನಿತಾ ಅಕ್ಕಲಕೋಟ, ಅನಸುಬಾಯಿ ಫಕೀರಪ್ಪ, ಗೌರಾಬಾಯಿ ಚವ್ಹಾಣ, ಸಾಸಿ ಬೆನಕನಹಳ್ಳಿ, ದತ್ತು ಸಿಂಧೆ, ಪ್ರಭು ಜಮಾದಾರ, ಹುಣಚಪ್ಪ ಅಂತರಗಂಗಿ ಮತ್ತಿತರರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

ಅನ್ಯಾಯದ ಆರೋಪ: ತಾಲ್ಲೂಕು ಪಂಚಾಯಿತಿ ಎರಡನೇಯ ಅವಧಿಗಾಗಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಅಧ್ಯಕ್ಷರಾಗಲು ಪರಿಶಿಷ್ಟ ಜಾತಿ ಪುರುಷ ಸದಸ್ಯರು ಲಭ್ಯವಿದ್ದರೂ, ಪಕ್ಷವು ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರನ್ನು ಆಯ್ಕೆ ಮಾಡಿದೆ. ನಾನು ಸುಮಾರು 20 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡು ಪಕ್ಷಕ್ಕಾಗಿ ದುಡದಿದ್ದೇನೆ. ಆದರೂ ನನಗೆ ತಾ.ಪಂ ಅಧ್ಯಕ್ಷ ಸ್ಥಾನ ನೀಡದೆ ಅನ್ಯಾಯ ಮಾಡಿದ್ದಾರೆ~ ಎಂದು ದೇವಲಗಾಣಗಾಪುರ ತಾ.ಪಂ ಸದಸ್ಯ ದತ್ತು ಸಿಂಧೆ ಆರೋಪಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT