ADVERTISEMENT

ಚೆಲ್ಹೇರಿ ಗ್ರಾಮಸ್ಥರಿಗೆ ಕೊನೆಗೂ ಸಿಕ್ಕ ಪಡಿತರ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 9:41 IST
Last Updated 21 ಅಕ್ಟೋಬರ್ 2017, 9:41 IST

ಯಾದಗಿರಿ: ಹಲವು ವರ್ಷಗಳಿಂದ ಪಡಿತರ ಪಡೆಯಲು ಅಜಲಾಪುರ ಗ್ರಾಮಕ್ಕೆ ಅಲೆಯುತ್ತಿದ್ದ ಚೆಲ್ಹೇರಿ ಜನರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಗಡಿ ಗ್ರಾಮದಲ್ಲಿ ಈಗ ಪಡಿತರ ವಿತರಣಾ ಕೇಂದ್ರ ಸ್ಥಾಪನೆಯಾಗಿದ್ದು, ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.

ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಚೆಲ್ಹೇರಿ ಗ್ರಾಮ ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. 190 ಪಡಿತರ ಕುಟುಂಬಗಳಿವೆ. ಆದರೆ, ಚೆಲ್ಹೇರಿ ಗ್ರಾಮಸ್ಥರು ಪಡಿತರಕ್ಕಾಗಿ ಅಜಲಾಪುರ ಗ್ರಾಮಕ್ಕೆ ಹೋಗಬೇಕಾಗಿತ್ತು.

ಜನರಿಗೆ ಆಗುತ್ತಿರುವ ಅನನುಕೂಲ ತಪ್ಪಿಸುವ ಉದ್ದೇಶದಿಂದ ಇದೀಗ ಗ್ರಾಮದಲ್ಲಿಯೇ ಪಡಿತರ ವಿತರಣೆಯ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಗಡಿಗ್ರಾಮದ ಜನರು ಸಹಜವಾಗಿ ಖುಷಿಯಲ್ಲಿದ್ದಾರೆ.

ADVERTISEMENT

‘ಗಡಿಗ್ರಾಮಗಳು ಅಭಿವೃದ್ಧಿ ಪಥದಲ್ಲಿ ತೀರಾ ಹಿಂದುಳಿದಿವೆ. ಕನಿಷ್ಠ ಪಡಿತರ ಪಡೆಯಲಿಕ್ಕೂ ದೂರದ ಮತ್ತೊಂದು ಗ್ರಾಮಕ್ಕೆ ಹೋಗಬೇಕಾದಂತಹ ಸಂಕಷ್ಟ ಸ್ಥಿತಿ ಇದೆ.

ಪಡಿತರ ವಿತರಣಾ ಕೇಂದ್ರ ಇಲ್ಲದ ಗಡಿ ಗ್ರಾಮಗಳಲ್ಲಿ ಕೂಡಲೇ ಜಿಲ್ಲಾಡಳಿತ ಪಡಿತರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದರೆ ಬಡ ಜನರಿಗೆ ಅನುಕೂಲ ಆಗಲಿದೆ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕ ಉಪಾಧ್ಯಕ್ಷ ಶರಣಗೌಡ ಕಂದಕೂರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.