ADVERTISEMENT

ಮಲಿನಗೊಂಡ ಅಂಬೇಡ್ಕರ್ ಭಾವಚಿತ್ರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 7:25 IST
Last Updated 14 ಏಪ್ರಿಲ್ 2011, 7:25 IST

ಸುರಪುರ: ಗುರುವಾರ (ಏಪ್ರಿಲ್ 14) ದೇಶದೆಲ್ಲೆಡೆ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅಂಬೇಡ್ಕರ್ ವೃತ್ತಗಳನ್ನು, ಪುತ್ಥಳಿಗಳನ್ನು, ಭಾವಚಿತ್ರಗಳನ್ನು ಜಯಂತಿಯ ಅಂಗವಾಗಿ ಸ್ವಚ್ಛಗೊಳಿ ಸಲಾಗುತ್ತದೆ. ವಿದ್ಯುತ್ ದೀಪ, ಸುಣ್ಣ ಬಣ್ಣ, ಹೂ ಹಾರಗಳಿಂದ ಅಲಂಕರಿಸಲಾಗುತ್ತದೆ.

ತಾಲ್ಲೂಕಿನ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಡಾ. ಅಂಬೇಡ್ಕರ್ ಸೇರಿದಂತೆ ಇತರ ರಾಷ್ಟ್ರನಾಯಕರ ಭಾವಚಿತ್ರಗಳನ್ನು ಬರೆಸಲಾಗಿದೆ. ವಿದ್ಯಾರ್ಥಿಗಳ ಮಾಹಿತಿಗಾಗಿ ಇದು ಉತ್ತಮ ಬೆಳವಣಿಗೆ. ಆದರೆ ಅಂತಹ ಮಹಾನ್ ನಾಯಕರ ಭಾವಚಿತ್ರಗಳಿಗೆ ಅವಮಾನ ಆಗದ ಹಾಗೆ ನೋಡಿ ಕೊಳ್ಳುವುದು ಶಾಲಾ ಮುಖ್ಯಸ್ಥರ ಜವಾಬ್ದಾರಿ.
ತಾಲ್ಲೂಕಿನ ಕೆಂಭಾವಿ ರಸ್ತೆಯಲ್ಲಿ ರುವ ಹೊಸ ಸಿದ್ದಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಗೋಡೆಗೆ ಡಾ. ಅಂಬೇಡ್ಕರ್, ಭಗತಸಿಂಗ್ ಹಾಗೂ ಇತರ ನಾಯಕರ ಭಾವಚಿತ್ರ ಬರೆಸ ಲಾಗಿದೆ.

ಆದರೆ ಭಾವಚಿತ್ರಗಳು ಹೊಲ ಸಾಗದ ಹಾಗೆ ಇಲ್ಲಿಯ ಸಿಬ್ಬಂದಿ ನೋಡಿಕೊಳ್ಳುತ್ತಿಲ್ಲ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಗುರುವಾರ ಡಾ. ಅಂಬೇಡ್ಕರ್ ಜಯಂತಿ ಇದೆ. ಆದರೂ ಭಾವಚಿತ್ರ ವಿರುವ ಗೋಡೆಯನ್ನು, ಪರಿಸರವನ್ನು ಸ್ವಚ್ಛಗೊಳಿಸದಿರುವುದಕ್ಕೆ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಗೋಡೆಗೆ ಹತ್ತಿಕೊಂಡೆ ತಿಪ್ಪೆಗುಂಡಿ ಗಳನ್ನು ಹಾಕಲಾಗಿದೆ. ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಸೆಗಣಿ ಹಚ್ಚಲಾಗಿದೆ. ಇದರಿಂದ ರಾಷ್ಟ್ರನಾಯಕರಿಗೆ ಅವ ಮಾನ ಆಗಿದ್ದಲ್ಲದೆ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾ ಗುತ್ತಿದೆ. ಶಾಲೆಯ ಪರಿಸರ ಸ್ವಚ್ಛವಾಗಿ ಟ್ಟುಕೊಳ್ಳುವುದು ಶಿಕ್ಷಕರ ಮತ್ತು ಮೇಲುಸ್ತುವಾರಿ ಸಮಿತಿಯ ಕರ್ತವ್ಯ. ಅಲ್ಲದೆ ಗ್ರಾಮಸ್ಥರು ಈ ನಿಟ್ಟಿನಲ್ಲಿ ಸಹಕರಿಸುವುದು ಅಷ್ಟೆ ಮುಖ್ಯ ಎಂದು ಸಮಿತಿ ಹೇಳಿದೆ.

ಕಾರಣ ತಕ್ಷಣ ತಿಪ್ಪೆಗುಂಡಿಗಳನ್ನು ತೆರವುಗೊಳಿಸಬೇಕು. ರಾಷ್ಟ್ರನಾಯಕರ ಭಾವಚಿತ್ರಗಳನ್ನು ಸ್ವಚ್ಛವಾಗಿ ಮತ್ತು ಅಂದವಾಗಿ ಇಟ್ಟುಕೊಳ್ಳಬೇಕು ಎಂದು ಸಮಿತಿಯ ಜಿಲ್ಲಾ ಸಂಘಟನಾ      ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ತಾಲ್ಲೂಕು ಸಂಚಾಲಕ ಶರಣಪ್ಪ ದಖನಿ, ಮುಖಂಡರಾದ ತಿಪ್ಪಣ್ಣ ಶೆಳ್ಳಿಗಿ, ಮಲ್ಲಿಕಾರ್ಜುನ ತಳ್ಳಳ್ಳಿ, ನಿಂಗಣ್ಣ ಗೋನಾಲ, ಖಾಜಾ ಹುಸೇನ್ ಗುಡ ಗುಂಟಿ, ವೀರಭದ್ರ ತಳವಾರ ಗೇರಾ, ಸಿದ್ದು ಹೆಗಡೆ, ಶಿವಲಿಂಗ ಹಸನಾಪುರ ಇತರರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.