ADVERTISEMENT

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡಬೇಕು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 10:50 IST
Last Updated 20 ಮಾರ್ಚ್ 2012, 10:50 IST

ಸುರಪುರ: ಜಿಲ್ಲೆಯಲ್ಲಿ ಕನಕ ಯುವಸೇನೆ ಬಲವಾಗಿ ಸಂಘಟಿತವಾಗುತ್ತಿರುವುದು ಸಂತೋಷಕರ. ಆದರೆ ಸೇನೆ ಕೇವಲ ಕುರುಬ ಜಾತಿಗೆ ಮಾತ್ರ ಸೀಮಿತವಾಗಬಾರದು. ಕಷ್ಟದಲ್ಲಿರುವ ಎಲ್ಲಾ ಜಾತಿ ಜನಾಂಗದವರಿಗೆ ಸಹಾಯ ಹಸ್ತ ಚಾಚಬೇಕು. ಈ ಮೂಲಕ ಕುರುಬ ಸಮಾಜ ಪರಧರ್ಮ ಪರೋಪಕಾರಿ ಎಂದು ಬಿಂಬಿಸಬೇಕು.
 
ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಕರೆ ನೀಡಿದರು.ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಭಾನುವಾರ ಕನಕ ಯುವಸೇನೆ ಆಯೋಜಿಸಿದ್ದ ಕನಕದಾಸರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ್ ಮಾತನಾಡಿ, ಕುರುಬ ಸಮಾಜ ಶ್ರೇಷ್ಠ ಸಮಾಜ. ಕಷ್ಟಜೀವಿಗಳು, ನಂಬಿಕಸ್ತರು, ಶ್ರಮ ಜೀವಿಗಳು ಆಗಿರುವ ಕುರುಬ ಜನಾಂಗ ಹಿಂದುಳಿದಿದೆ. ಈಚೆಗೆ ಸಮಾಜದ ಕೆಲವರು ರಾಜಕೀಯವಾಗಿ ಮುಂದೆ ಬಂದರೂ ಸಂಘಟನೆಯ    ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕನಕ ಯುವಸೇನೆ ಶ್ರಮಿಸಲಿ ಎಂದು ಕಿವಿ ಮಾತು ಹೇಳಿದರು.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ, ಸೇನೆಯ ಜಿಲ್ಲಾಧ್ಯಕ್ಷ ರಂಗನಗೌಡ ಪಾಟೀಲ ದೇವಿಕೇರಿ ಮಾತನಾಡಿದರು. ಮಲ್ಕಣ್ಣ ಯಾದವ್ ಸ್ವಾಗತಿಸಿದರು. ಬಲಭೀಮ ದೇವಿಕೇರಿ ನಿರೂಪಿಸಿದರು. ನಿಂಗಾರೆಡ್ಡಿ ಶೆಟ್ಟಿಕೇರಿ ವಂದಿಸಿದರು.

ಮುಖಂಡರಾದ ಸಾಹೇಬಗೌಡ ದೇವಿಕೇರಿ, ರಾಮನಗೌಡ ದೇವಿಕೇರಿ, ಸೇನೆಯ ತಾಲ್ಲೂಕು ಅಧ್ಯಕ್ಷ ಮಲ್ಲು ದಂಡಿನ್, ನಿಂಗಯ್ಯಗೌಡ ಪಾಟೀಲ, ಮುದಕಪ್ಪಗೌಡ ಹೆಬ್ಬಾಳ, ಭೀಮನಗೌಡ ಪಾಟೀಲ, ಚಂದ್ರು ಮಲ್ಕಾಪುರ, ಭೀಮರಾಯ ಮೂಲಿಮನಿ, ಶಿವರಾಜ ಚಂದಲಾಪುರ, ನಾಗಪ್ಪ ಸಜ್ಜನ್, ಮಲ್ಕಣ್ಣ ದೇವತಕಲ್, ಸಂಗಣ್ಣ ಕಾಮನಟಗಿ, ನಿಂಗಣ್ಣ ಯಾದವ, ಭೀಮಣ್ಣ ಬಾಣಂತಿಹಾಳ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.