ADVERTISEMENT

ವಿವಿಧೆಡೆ ಗ್ರಾಪಂ ಅಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 7:45 IST
Last Updated 21 ಡಿಸೆಂಬರ್ 2012, 7:45 IST
ಕೆಂಭಾವಿ: ಸಮೀಪದ ನಗನೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ನಿಂಗಾರಡ್ಡಿ ಕುಲಕರ್ಣಿ ಹಾಗೂ ಉಪ ಆಧ್ಯಕ್ಷರಾಗಿ ಪಾರ್ವತಿ ಬೆಳ್ಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎರಡನೇ ಅವಧಿಗಾಗಿ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಿಂಗಾರಡ್ಡಿ ಕುಲಕರ್ಣಿ, ಪಾರ್ವತಿ ಮಾನಪ್ಪ ಬೆಳ್ಳೆ ಮಾತ್ರ ನಾಮ ಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿಗಳಾಗಿ ತೋಟಗಾರಿಕೆ ಇಲಾಖೆ ಅಧಿಕಾರಿ ಶ್ರೀಶೈಲ ವಾಗ್ಮರೆ ಕಾರ್ಯ ನಿರ್ವಹಿಸಿದರು. 

ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿಜಯೋತ್ಸವದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧನಗೌಡ ಪೊಲೀಸ್‌ಪಾಟೀಲ, ಕೆಂಭಾವಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಬುದೂರ, ಮಾಜಿ ಸೈನಿಕ ಮಲ್ಲಣ್ಣ ಮೇಟಿ, ಹಳ್ಳೆಪ್ಪ ಹವಾಲ್ದಾರ, ಹರಿಶ್ಚಂದ್ರ ಕಟ್ಟಿಮನಿ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಶರಣಗೌಡ ಪಾಟೀಲ, ಶಾಂತಗೌಡ ಮೇಟಿ, ಪರುಶುರಾಮ, ಶಂಕ್ರೆಪ್ಪ ಹವಾಲ್ದಾರ, ಇರಗಂಟೆಪ್ಪ, ಹಳ್ಳೆಪ್ಪಗೌಡ ನಗನೂರ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

ಯಾಳಗಿ: ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸಾಯಬಣ್ಣ ದೊಡಮನಿ ಅಧ್ಯಕ್ಷರಾಗಿ ಹಾಗೂ ಬಸಮ್ಮ ಮಾನಸುಣಗಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿದ್ದ ಜಿಲ್ಲಾ ಪಂಚಾಯತಿ ಎಂಜಿನಿಯರ್ ಬಸಯ್ಯ ಹಿರೇಮಠ, ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅವಿರೋಧ ಆಯ್ಕೆ ಘೋಷಿಸಿದರು. 

ನಂತರ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಿಗರು ಸಿಹಿಹಂಚಿ, ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ಮುಖಂಡರಾದ ಬಸನಗೌಡ ಹೊಸಮನಿ, ಅಮೀನರಡ್ಡಿ ಪಾಟೀಲ, ಎಪಿಎಮ್‌ಸಿ ಸದಸ್ಯ ಶರಣಗೌಡ ಪಾಟೀಲ, ರಾಮನಗೌಡ ಪೊಲೀಸ್‌ಪಾಟೀಲ, ರಾಮನಗೌಡ ವಂದಗನೂರ, ಮಹೇಶ ಹುಜರತಿ, ಬಸವರಾಜ ಹೆಳವರ, ಹಣಮಂತರಾಯ ಮಾನಸುಣಗಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.

ಮಾಲಗತ್ತಿ: ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೋಮವ್ವ ಧರಿ, ಉಪಾಧ್ಯಕ್ಷರಾಗಿ ಚಂದ್ರಶೇಖರ ಭೀಮಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಶ್ರೀಶೈಲ ವಾಗ್ಮರೆ ತಿಳಿಸಿದ್ದಾರೆ. ಮುದನೂರು: ಮುದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜ್ಯೋತಿ ದೊರಿ, ಉಪಾಧ್ಯಕ್ಷರಾಗಿ ಶಾಂತಮ್ಮ ಸೊನ್ನದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸಿಡಿಪಿಓ ದೊಡಮನಿ ತಿಳಿಸಿದ್ದಾರೆ. 

ಮುಖಂಡರಾದ ನಾಗರಡ್ಡೆಪ್ಪ ಚೌದ್ರಿ, ಭೀಮರಾಯ ಸಾಹು ಹೊಟ್ಟಿ, ಯಲ್ಲಪ್ಪ ಕುರಕುಂದಿ, ಬಾಬುಗೌಡ ಅಗತೀರ್ಥ, ಸುಬ್ಬಣ್ಣಮುತ್ಯಾ ಚೌದ್ರಿ, ರಮೇಶ ಕೊಳ್ಳಿ, ಮಡಿವಾಳಪ್ಪಗೌಡ ಬಳವಾಟ, ಗೋಪಾಲರಡ್ಡಿ ಹೊಸಮನಿ, ಮಡಿವಾಳಪ್ಪ ಜಂಗಳಿ, ಶೀವಣ್ಣ ನಾಟಿಕಾರ ಇದ್ದರು.

ಮಲ್ಲಾ: ಸಮೀಪದ ಮಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿದ್ದಪ್ಪ ಕಣದಣಿ, ಉಪಾಧ್ಯಕ್ಷರಾಗಿ ರೇಣುಕಮ್ಮ ಬಸವರಾಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಬಿ.ಎಸ್. ಕರಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.