ADVERTISEMENT

ಶಿಕ್ಷಕರ ಪ್ರತಿಭಾ ಪರಿಷತ್ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 8:54 IST
Last Updated 25 ಡಿಸೆಂಬರ್ 2012, 8:54 IST

ಅಫಜಲಪುರ: ಅಫಜಲಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಬೆಂಗಳೂರ ತಾಲ್ಲೂಕು ಘಟಕದ 2ನೇ ವಾರ್ಷಿಕೋತ್ಸವವನ್ನು ಸೋಮವಾರ ಶಿಕ್ಷಣ ಸಮನ್ವಯ ಅಧಿಕಾರಿ ಸೋಮಶೇಖರ ಹಂಚನಾಳ ಉದ್ಘಾಟಿಸಿದರು.

ಸಿಪಿಐ ಕೆ.ರಾಜೇಂದ್ರ ಮಾತನಾಡಿ ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸುವದು ಇಂದಿನ ಪರಸ್ಥಿತಿಯಲ್ಲಿ ಅವಶ್ಯಕವಾಗಿದೆ. ಶಿಕ್ಷಕರು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಇಂದಿನ ಯುವಕರು, ವಿದ್ಯಾರ್ಥಿಗಳು ನಾಳಿನ ಪ್ರಜೆಗಳು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯವಹಿಸಿ ಶಿಕ್ಷಕರ ಸೇವೆ ಮತ್ತು ಶಿಕ್ಷಕರ ಪ್ರತಿಭಾ ಪರಿಷತ್ ಕಾರ್ಯವನ್ನು ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದರು. ಪರಿಷತ್ ಅಧ್ಯಕ್ಷ ರಾಜಕುಮಾರ ಗೌರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಅಣ್ಣಾರಾಯ ಅಜಗೊಂಡ ಮಾತನಾಡಿ ಶಿಕ್ಷಕರ ಸೇವೆ ಅಮೋಘವಾಗಿದೆ. ಶಿಕ್ಷಕರಿಂದ ದೇಶದ ಪರಿವರ್ತನೆ ಸಾಧ್ಯವಿದೆ ಎಂದು ಅವರು ತಿಳಿಸಿದರು.

ತಹಸೀಲ್ದಾರ ರಾಜಾ ಪಟೇಲ, ತಾ.ಪಂ. ಅಧಿಕಾರಿ ಶರಣಪ್ಪ ನಂದಗಿರಿ, ಕಾರ್ಪೋರೇಶನ ಬ್ಯಾಂಕ ವ್ಯವಸ್ಥಾಪಕ ಶ್ರೀಶೈಲ ವಾಲಿಕಾರ, ಪ್ರಾಚಾರ್ಯ ಎಸ್.ಸಿ.ಪಾಟೀಲ, ಉಪ ಪ್ರಾಚಾರ್ಯ ಸದಾನಂದ ನಾಯ್ಕಿ, ಶಿಕ್ಷಕರ ಸಂಘದ ಜಿಲ್ಲಾ ನಿರ್ದೇಶಕ ರಾಜಶೇಖರ ಬಿರಾದಾರ, ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶರಣು ಭೊಗುಂಡೆ, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಸುಭಾಸ್ ಜೇವರ್ಗಿ, ಅನುದಾನ ರಹಿತ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಾರಾಯ ಹೆಗ್ಗಿ, ನೊಬೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೋಮಶೇಖರ ರೇವೂರ, ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಅರ್ಜುಣಗಿ ಬಳೂರ್ಗಿ ಮತ್ತಿತರು ಭಾಗವಹಿದ್ದರು.

ಸನ್ಮಾನ: 2011ನೇ ಸಾಲೀನಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಲ್ಲಿಕಾರ್ಜುನ ಭತಗುಣಕಿ ಹಾಗೂ ಶ್ರೀಕಾಂತ ಕಾಚಾಪುರೆ ಮತ್ತು ತಾಲ್ಲೂಕು ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ಅತ್ಯತ್ತಮ ಶಿಕ್ಷಕರೆಂದು ಪ್ರಾಥಮಿಕ, ಪ್ರೌಢ ಮತ್ತು ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವರಾದ ಗಂಗಾಧರ ಪೊದ್ದಾರ, ಬಾಬಾಸಾಬ ಆಲೂರ, ಗಿರೆಪ್ಪಾ ಕನ್ನೂರ, ಭೀಮರಾಯಗೌಡ ಪಾಟೀಲ, ದೇಸು ಚೌವ್ಹಾಣ, ರಿಯಾನಾ ಬೇಗಂ, ಘವೇರಾ ಬೇಗಂ, ಗೌರಿಶಂಕರ ಉಡಗಿ, ಮಲ್ಲಿಕಾರ್ಜುನ ಚವಡಿಹಾಳ, ಬಸಯ್ಯಸ್ವಾಮಿ, ಜೈಭೀಮ ಕುಮಸಗಿ, ಸತ್ಯವತಿ, ಸಿದ್ದಾರಾಮ ರಾಜಮಾನೆ, ಸುನೀಲ ಕುಲಕರ್ಣಿ, ಲಕ್ಷ್ಮೀಬಾಯಿ ಸಿ ಮ್ಯಾಳೇಸಿ, ವಿಜಯಕುಮಾರ ಸಾಲೀಮಠ, ಆನಂದ ಕುಂಬಾರ, ನಿರ್ಮಲಾ, ವಸಂತ ಶಹಾಪೂರ, ಶಾಂತರಸ ಹೊಸಮನಿ, ಶಿವಾನಂದ ಹಸರಗುಂಡಗಿ, ಅವಿನಾಶ ಹಾದಿಮನಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.