ADVERTISEMENT

ಸಾಧಕರ ಜೀವನ ಮೌಲ್ಯಗಳ ಅನುಕರಣೆಗೆ ಕರೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 9:18 IST
Last Updated 18 ಮಾರ್ಚ್ 2014, 9:18 IST

ಕಾಳಗಿ:  ‘ಮಕ್ಕಳು ವಿವೇಕಾನಂದ, ರಾಧಕೃಷ್ಣ, ಲಾಲಾ ಲಜಪತರಾಯ್‌, ಅಬುಲ್‌ ಕಲಾಂ, ಭಗತ್ ಸಿಂಗ್ ರಂತಹ ಮಹಾನ ನಾಯಕರ ಜೀವನ ಮೌಲ್ಯ­ಗಳನ್ನು ಅನುಕರಣೆ ಮಾಡು­ವು­ದರಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ’ ಎಂದು ಶಾಂತೇಶ್ವರ ಮಠದ ಡಾ.ಶಾಂತ ಸೋಮನಾಥ ಶಿವಾಚಾ­ರ್ಯರು ಹೇಳಿದರು.

ಅವರು, ಈಚೆಗೆ ತೆಂಗಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿ­ಕೊಳ್ಳ­ಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿಧ್ಯ ವಹಿಸಿ ಮಾತ­ನಾಡಿದರು.

ಉದ್ಘಾ­ಟಿಸಿದ ತಾ.ಪಂ.ಮಾಜಿ ಅಧ್ಯಕ್ಷ ಪಂಡಿತ­ರಾವ ಭೇರನ್, ಉಪನ್ಯಾಸಕ ರೇವಣಸಿದ್ದಪ್ಪ ದುಕಾನ್ ಮಾತನಾಡಿ, ವಿದ್ಯಾರ್ಥಿ­ಗಳು ಯಾವಾ ಗಲೂ ಬೇರೆಯವರ ಏಳ್ಗೆಗೆ ಸಹಾಯ ಮಾಡಬೇಕೆ ಹೊರತು, ಅವರ ಏಳಿಗೆ ಕಂಡು ಕಾಲೆಳೆಯುವ ಪ್ರಯತ್ನ ಮಾಡ­ಬಾರದು’ ಎಂದರು.

ಎಂಜಿನಿಯರ್ ಪರಮೇಶ್ವರ ಪಾಟೀಲ, ನಿತ್ಯಾನಂದ ಮಾತನಾಡಿ­ದರು. ಮುಖ್ಯಶಿಕ್ಷಕ ರವೀಂದ್ರ ರೆಡ್ಡಿ ವಾರ್ಷಿಕ ವರದಿ ಓದಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ­ಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.