ADVERTISEMENT

‘ದೇಶ ರಕ್ಷಣೆಯಲ್ಲಿ ಯುವಕರ ಪಾತ್ರ ಮಹತ್ತರ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2015, 6:48 IST
Last Updated 24 ಮಾರ್ಚ್ 2015, 6:48 IST

ಯಾದಗಿರಿ:  ಭಗತ್‌ಸಿಂಗ್, ರಾಜಗುರು, ಸುಖದೇವ ಅವರ ಹುತಾತ್ಮ ದಿನವನ್ನು ನಗರದ ಹಿಂದಿ ಪ್ರಚಾರ ಸಭಾದ ಆವರಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಎಬಿವಿಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸಂಗಮೇಶ ಮಗದುಮ್‌ ಮಾತನಾಡಿ, ದೇಶದ ರಕ್ಷಣೆಯಲ್ಲಿ ಯುವ ಕರ ಪಾತ್ರ ಮಹತ್ತರವಾಗಿದೆ. ಇಂದಿನ ದಿನಗಳಲ್ಲಿ ಯುವಕರು ದುಶ್ಚಟಕ್ಕೆ ಬಲಿಯಾಗಿ ಹಾಳಾಗುತ್ತಿದ್ದಾರೆ. ಈಗಿನ ಪಂಜಾಬ್ ಪ್ರದೇಶವು ಈ ಹಿಂದೆ ಸ್ವಾತಂತ್ರ್ಯ ವೀರರು, ಸೈನಿಕರನ್ನು ಕೊಡು ವುದರಲ್ಲಿ  ಮುಂಚೂಣಿಯಲ್ಲಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅತೀ ಹೆಚ್ಚು ಡ್ರಗ್ಸ್ ಬಳಸುವುದರಲ್ಲಿ ಮುಂದಿದೆ. ಇಂತಹ ಬೆಳವಣಿಗೆ ಆತಂಕಕಾರಿ ಎಂದರು.

ಹುತಾತ್ಮ ದಿನವಾದ ಇಂದು ವಿದ್ಯಾರ್ಥಿಗಳು ರಾಜಗುರು, ಭಗತ್‌ ಸಿಂಗ್, ಸುಖದೇವ ಹಾಗೂ ಎಲ್ಲ ವೀರರ, ದೇಶ ಭಕ್ತರ ಚರಿತ್ರೆಯನ್ನು ಓದುವುದು, ದೇಶ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಎಬಿವಿಪಿ ಕಾರ್ಯದರ್ಶಿ ಮಲ್ಲಿ ಕಾರ್ಜುನ ಬಡಿಗೇರ್ ಎಬಿವಿಪಿ ಪ್ರಾಸ್ತಾವಿ ಕವಾಗಿ ಮಾತನಾಡಿದರು.  ಪ್ರದೀಪ್ ಮೆಟಗುಡ್ಡ, ಮಾಳಿಂಗರಾಯ ಪೂಜಾರಿ, ಬಿರೇಶ ಚಿರಾತಕ, ನಿತೇಶ ಕುರುಕುಂದಿ, ಮಲ್ಲಿಕಾರ್ಜುನ ಬಡಿಗೇರ, ಮಹೇಶ ಜಿನಕೇರಿ, ಸುಭಾಷ ದೇವ ದುರ್ಗ, ಸಚಿನ ಮುರುಂಬೆ, ಸುನೀಲ ಕಡೇಚೂರ್, ಶಶಾಂಕ ನಾಯಕ, ಅಭಿಷೇಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.