ADVERTISEMENT

‘ಪ್ರಮಾಣ ಪತ್ರ ನೀಡದಿದ್ದರೆ ಹೋರಾಟ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:14 IST
Last Updated 7 ಜುಲೈ 2022, 4:14 IST
ಸೈದಾಪುರದಲ್ಲಿ ಬೇಡ ಜಂಗಮ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಸಮಾಜದ ಮುಖಂಡರು ಮನವಿ ಸಲ್ಲಿಸಿದರು. ಚನ್ನವೀರ ಶಿವಾಚಾರ್ಯರು, ಗುರುಮೂರ್ತಿ ಶಿವಾಚಾರ್ಯರು ಇದ್ದರು
ಸೈದಾಪುರದಲ್ಲಿ ಬೇಡ ಜಂಗಮ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಸಮಾಜದ ಮುಖಂಡರು ಮನವಿ ಸಲ್ಲಿಸಿದರು. ಚನ್ನವೀರ ಶಿವಾಚಾರ್ಯರು, ಗುರುಮೂರ್ತಿ ಶಿವಾಚಾರ್ಯರು ಇದ್ದರು   

ಸೈದಾಪುರ: ಪಟ್ಟಣ ನಾಡ ಕಚೇರಿ ಮುಂದೆ ವಲಯ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೇಡ ಜಂಗಮ ಪ್ರಮಾಣ ಪತ್ರ ಹಕ್ಕು ಒತ್ತಾಯದ ಕುರಿತು ಸತ್ಯ ಪ್ರತಿಪಾದನಾ ಸತ್ಯಾಗ್ರಹ
ಕೈಗೊಳ್ಳಲಾಯಿತು.

ವಲಯ ಘಟಕದ ಅಧ್ಯಕ್ಷ ಶರಣಯ್ಯ ಸ್ವಾಮಿ ಪಂಚಕಂತಿಮಠ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡ ಮಠಾದೀಶರು ನಾಡ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಕಳೆದ ತಿಂಗಳು 30 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೇಡಜಂಗಮರು ಸತ್ಯ ಪ್ರತಿಪಾದನಾ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಅಂದು ಜುಲೈ 1ಕ್ಕೆ ಆದೇಶ ಹೊರಡಿಸುತ್ತೇವೆ ಎಂದಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಶ್ವಾಸನೆ ನೀಡಿ ಇಲ್ಲಿಯವರೆಗೆ ಯಾವುದೇ ಆದೇಶಹೊರಡಿಸಿಲ್ಲ.

ADVERTISEMENT

ನಮ್ಮ ಸತ್ಯ ಪ್ರತಿಪಾದನಾಉಪವಾಸ ಸತ್ಯಗ್ರಹ ಹೋರಾಟ ಬೆಂಗಳೂರಿನಲ್ಲಿ ಮುಂದುವರಿದಿದೆ. ಪ್ರಮಾಣ ಪತ್ರ ವಿತರಿಸದಿದ್ದರೆ ಬೃಹತ್ ಹೋರಾಟವ ಮಾಡುತ್ತೇವೆ ಎಂದು ಎಚ್ಚರಿಸಿದರು. ಈ ವೇಳೆ ‌ಬಾಡಿಯಾಲ ಮೂಲ ಮಠದ ಚನ್ನವೀರ ಶಿವಾಚಾರ್ಯರು, ಕಡೇಚೂರು ಸಂಸ್ಥಾನ ಮಠದ ಗುರುಮೂರ್ತಿ ಶಿವಾಚಾರ್ಯರು, ಡಾ.ಅಮರೇಶ. ಡಿ.ಗೌಡರ, ಉತ್ನಯ್ಯ ಸ್ವಾಮಿ ಗೊಂದೆಡಗಿ, ಶಂಭುಲಿಂಗಯ್ಯ ಸ್ವಾಮಿ ಬೆಳಗುಂದಿ ಸೇರಿದಂತೆ ಸಮಾಜದ ಮುಖಂಡರು, ಯುವಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.