ADVERTISEMENT

ಯಾದಗಿರಿ | ಜಾತಿ ಸಮೀಕ್ಷೆ: ಜಿಲ್ಲಾಧಿಕಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:02 IST
Last Updated 16 ಮೇ 2025, 16:02 IST
ಯಾದಗಿರಿ ನಗರದ ಗಾಂಧಿ ನಗರ ತಾಂಡಾ, ಅಂಬೇಡ್ಕರ್ ನಗರ, ಕೋಟಗೇರಾ ವಾಡಾಕ್ಕೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆಯನ್ನು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಭೇಟಿ ನೀಡಿ ಪರಿಶೀಲನೆ ನಡೆಸಿದರು
ಯಾದಗಿರಿ ನಗರದ ಗಾಂಧಿ ನಗರ ತಾಂಡಾ, ಅಂಬೇಡ್ಕರ್ ನಗರ, ಕೋಟಗೇರಾ ವಾಡಾಕ್ಕೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆಯನ್ನು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಯಾದಗಿರಿ: ಕಳೆದ ಮೇ 5 ರಂದು ಆರಂಭವಾಗಿರುವ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ., ಅವರು ಶುಕ್ರವಾರ ನಗರದ ಗಾಂಧಿ ನಗರ ತಾಂಡಾ, ಅಂಬೇಡ್ಕರ್ ನಗರ, ಕೋಟಗೇರಾ ವಾಡಾಕ್ಕೆ ಭೇಟಿ ನೀಡಿದರು.

ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ‌ ನಡೆದಿರುವ ಈ ಸಮೀಕ್ಷೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ನಿರಂತರ ಮಾಹಿತಿ ಪಡೆಯುತ್ತಿರುವ ಜಿಲ್ಲಾಧಿಕಾರಿ ಅವರು ಸಮೀಕ್ಷಾ ಸ್ಥಳಕ್ಕೆ ತಾವೇ ಖುದ್ದು ಭೇಟಿ ನೀಡುವ‌ ಮೂಲಕ ಸಮೀಕ್ಷೆಯಲ್ಲಿರುವ ಸಿಬ್ಬಂದಿ ಮತ್ತು ಜನರಿಗೆ ಅಗತ್ಯ ಹೆಚ್ಚಿನ‌ ಮಾಹಿತಿ ನೀಡಿದರು.

ಈ ವೇಳೆ ಗಾಂಧಿ‌ ನಗರದಲ್ಲಿ ಸಮೀಕ್ಷೆ ನಡೆಸುತ್ತಿರುವ‌ ಬಗ್ಗೆ ದಾಖಲೆ ಪರಿಶೀಲಿಸಿದರು.

ADVERTISEMENT

ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ, ತಹಶೀಲ್ದಾರ್‌ ಸುರೇಶ ಅಂಕಲಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.