ADVERTISEMENT

ಬೆಳೆ ದರ್ಶಕ ಆ್ಯಪ್‌: ಆಕ್ಷೇಪಣೆಗೆ ಅವಕಾಶ

ಸಹಾಯಕ ಕೃಷಿ ನಿರ್ದೇಶಕಿ ಶ್ವೇತಾ ತಾಳೆಮರದ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:00 IST
Last Updated 19 ಸೆಪ್ಟೆಂಬರ್ 2020, 16:00 IST
ಯಾದಗಿರಿ ತಾಲ್ಲೂಕಿನ ರೈತರ ಜಮೀನೊಂದಕ್ಕೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಶ್ವೇತಾ ತಾಳೆಮರದ ಬೆಳೆ ಪರಿಶೀಲಿಸಿದರು
ಯಾದಗಿರಿ ತಾಲ್ಲೂಕಿನ ರೈತರ ಜಮೀನೊಂದಕ್ಕೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಶ್ವೇತಾ ತಾಳೆಮರದ ಬೆಳೆ ಪರಿಶೀಲಿಸಿದರು   

ಯಾದಗಿರಿ: ‘ಮುಂಗಾರು ಹಂಗಾಮಿನಲ್ಲಿ ನಡೆಸಲಾಗುತ್ತಿರುವ ಬೆಳೆ ಸಮೀಕ್ಷೆ ಮಾಹಿತಿತಪ್ಪಾಗಿದ್ದಲ್ಲಿ ಬೆಳೆ ದರ್ಶಕ ಆ್ಯಪ್‌ ಮೂಲಕ ರೈತರು ಅಕ್ಟೋಬರ್‌ 15ರ ವರೆಗೆ ಆಕ್ಷೇಪಣೆ ಸಲ್ಲಿಸಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ’ ಸಹಾಯಕ ಕೃಷಿ ನಿರ್ದೇಶಕಿ ಶ್ವೇತಾ ತಾಳೆಮರದ ತಿಳಿಸಿದ್ದಾರೆ.

ತಾಲ್ಲೂಕಿನ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ಬೆಳೆ ಪರಿಶೀಲಿಸಿ ನಂತರ ಮಾತನಾಡಿದ ಅವರು, ‘ ಮುಂಗಾರಿನಲ್ಲಿ ರೈತರು ಮತ್ತು ಖಾಸಗಿ ನಿವಾಸಿಗಳು ನಡೆಸಿರುವ ಬೆಳೆ ಸಮೀಕ್ಷೆ ಮಾಹಿತಿಯನ್ನು ರೈತರು ಬೆಳೆ ದರ್ಶಕ ಆ್ಯಪ್ ಮೂಲಕ ನೋಡಬಹುದು’ ಎಂದರು.

‘ರೈತರು ಬೆಳೆ ದರ್ಶಕ ಆಪ್‍ನ ಸಹಾಯದಿಂದ ಬೆಳೆಯ ವಿವರ, ವಿಸ್ತೀರ್ಣ, ಜಿಪಿಎಸ್ ಆಧಾರಿತ ಫೋಟೋಗಳ ವೀಕ್ಷಣೆ, ಬೆಳೆ ಸಮಿಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆ, ಮೇಲ್ವಿಚಾರಕ ಅಧಿಕಾರಿಗಳ ಅನುಮೋದನೆ, ಬೆಳೆ ವಿವರ ತಪ್ಪಾಗಿ ದಾಖಲಾಗಿದ್ದಲ್ಲಿ ಆಕ್ಷೇಪಣೆ, ಮೇಲ್ವಿಚಾರಣೆ ಮಾಡುವ ಸರ್ಕಾರಿ ಅಧಿಕಾರಿಗಳು ಆಕ್ಷೇಪಣೆ ಕುರಿತು ಕೈಗೊಂಡಿರುವ ಕ್ರಮದ ವಿವರ ಮುಂತಾದ ಮಾಹಿತಿ ಪಡೆಯಬಹುದಾಗಿದೆ. ರೈತರು ಬೆಳೆ ದರ್ಶಕ ಆ್ಯಪ್‌ ಸದುಪಯೋಗ ಪಡಿಸಿಕೊಳ್ಳಿ’ ಎಂದರು.

ADVERTISEMENT

ಈ ವೇಳೆ ರೈತರು, ಗ್ರಾಮ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.