ADVERTISEMENT

ಸ್ತ್ರೀ ಕುಲಕ್ಕೆ ಹೇಮರಡ್ಡಿ ಮಲ್ಲಮ್ಮ ಮಾದರಿ: ವೆಂಕಟರಡ್ಡಿಗೌಡ ಮುದ್ನಾಳ

​ಪ್ರಜಾವಾಣಿ ವಾರ್ತೆ
Published 10 ಮೇ 2022, 16:32 IST
Last Updated 10 ಮೇ 2022, 16:32 IST
ಯಾದಗಿರಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಸಲ್ಲಿಸಲಾಯಿತು. ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಇದ್ದರು
ಯಾದಗಿರಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಸಲ್ಲಿಸಲಾಯಿತು. ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಇದ್ದರು   

ಯಾದಗಿರಿ: ಹೇಮರಡ್ಡಿ ಮಲ್ಲಮ್ಮ ಅವರು ದೇವರಲ್ಲಿ ಅತಿ ಭಕ್ತಿ ಹೊಂದಿದ್ದರು. ಎಲ್ಲಿಯವರೆಗೆ ಸೂರ್ಯ-ಚಂದ್ರರು ಇರುತ್ತಾರೋ, ಅಲ್ಲಿಯವರೆಗೆ ರಡ್ಡಿ ಸಮುದಾಯಕ್ಕೆ ಬಡತನ ಬರಬಾರದು ಎಂಬ ಕನಸು ಹೇಮರಡ್ಡಿ ಮಲ್ಲಮ್ಮರದ್ದಾಗಿತ್ತು. ಅವರು ಸ್ರ್ತೀ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಮಲ್ಲಮ್ಮರಂತೆ ಕಷ್ಟದ ಮೆಟ್ಟಿಲು ಗಳನ್ನು ಏರಿದ ಮೇಲೆಯೇ ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.

ADVERTISEMENT

ಹೇಮರಡ್ಡಿ ಮಲ್ಲಮ್ಮ ಅವರು ಅರಿವಿಗಿಂತ ಆಚಾರ ದೊಡ್ಡದು ಎಂಬುದನ್ನು ಸಾಧಿಸಿ ಪ್ರಪಂಚಕ್ಕೆ ತೋರಿಸಿದರು. ಅವರು ತೋರಿದ ಆದರ್ಶದ ಬೆಳಕಿನಲ್ಲಿ ಮುನ್ನಡೆಯುವುದೇ ಆ ಮಹಾಶರಣೆಗೆ ನಾವು ಸಲ್ಲಿಸಬಹುದಾದ ಗೌರವವಾಗಿದೆ ಎಂದು ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಮಾತನಾಡಿ, ಸಮಾಜದಲ್ಲಿ ಬದಲಾವಣೆಯನ್ನು ಮೂಡಿಸಿದ ಮಹಿಳೆ ಯಾರಾದರೂ ಇದ್ದರೆ ಅದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂದು ಹೇಳಿದರು.

ಒಳ್ಳೆಯ ವಿದ್ಯಾಭ್ಯಾಸವನ್ನು ಮಾಡುವ ಮೂಲಕ ಉನ್ನತ ಹುದ್ದೆಗಳನ್ನು ರಡ್ಡಿ ಸಮಾಜದವರು ಪಡೆಯಬೇಕೆಂದು ಕರೆ ನೀಡಿದರು.

ಯಾದಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಸುಭಾಷ್ಚಂದ್ರ ಕೌಲಗಿ ವಿಶೇಷ ಉಪನ್ಯಾಸ ಮಾತನಾಡಿ, ಮನುಷ್ಯನಿಗೆ ನಿಷ್ಠೆ, ಶ್ರದ್ಧೆ, ನಂಬಿಕೆ, ವಿಶ್ವಾಸ ಮತ್ತು ಭಕ್ತಿ ಮುಖ್ಯ. ಇವೆಲ್ಲ ಗುಣಗಳು ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರಲ್ಲಿ ಇತ್ತು ಎಂದು ಹೇಳಿದರು.

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಸಲ್ಲಿಸಲಾಯಿತು. ಗುರುಪ್ರಸಾದ ವೈದ್ಯ ನಿರೂಪಿಸಿದರು.

ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಎಸ್. ಚಂಡ್ರಕಿ, ಯಾದಗಿರಿ ನಗರಸಭೆ ಅಧ್ಯಕ್ಷ ಸುರೇಶ್ ಅಂಬಿಗೇರ, ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತಾರಾದೇವಿ ಸಿ. ಮಠಪತಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವ ಸಮಿತಿ ಅಧ್ಯಕ್ಷ ರಾಚಣ್ಣಗೌಡ ಮುದ್ನಾಳ, ರಾಮರಡ್ಡಿಗೌಡ ತಂಗಡಗಿ, ಮಹೇಶ್ ರೆಡ್ಡಿ ಮುದ್ನಾಳ, ಬಸುಗೌಡ ಬೆಳ್ಳಾರ, ಆರ್ ವಿಶ್ವನಾಥ್ ರೆಡ್ಡಿ, ರಮೇಶ್ ದೊಡ್ಡಮನಿ ಸಿದ್ದರಾಜ ರೆಡ್ಡಿ ಸೇರಿದಂತೆ ಸಮುದಾಯದವರು ಭಾಗವಹಿಸಿದ್ದರು.

***

ಅದ್ಧೂರಿ ಭಾವಚಿತ್ರ ಮೆರವಣಿಗೆ

ಯಾದಗಿರಿ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯೋತ್ಸವ ಸಮಿತಿಯಿಂದ ನಗರದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ಜರಗಿತು.

ಮೆರವಣಿಗೆಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಚಾಲನೆ ನೀಡಿದರು. ಡೊಳ್ಳು ಕುಣಿತ, ವಾದ್ಯಮೇಳ, ತಮಟೆ ಹಲಗೆ ಜತೆಗೆ ವಿವಿಧ ಸಂಗೀತ ವಾದ್ಯಮೇಳಗಳೊಂದಿಗೆ ಹೊರಟ ಮೆರವಣಿಗೆ ತಹಶೀಲ್ದಾರ್‌ ಕಚೇರಿ ಮುಂಭಾಗದ ಮುಖ್ಯ ರಸ್ತೆಯಿಂದ ಲಾಲ್‌ಬಹದ್ದೂರ್‌ ಶಾಸ್ತ್ರಿ ವೃತ್ತ, ಸುಭಾಷ ವೃತ್ತ, ಪದವಿ ಕಾಲೇಜು ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ಮೆರವಣಿಗೆಯಲ್ಲಿ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ, ಮಾಜಿ ಶಾಸಕರಾದ ವೀರಬಸವಂತರೆಡ್ಡಿ ಮುದ್ನಾಳ, ಚನ್ನಾರೆಡ್ಡಿ ಪಾಟೀಲ ತುನ್ನೂರು, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಮುಖಂಡರಾದ ರಾಮರೆಡ್ಡಿ ತಂಗಡಿಗಿ, ಶರಣಪ್ಪಗೌಡ ಮಲ್ಹಾರ, ಸಿದ್ದಲಿಂಗರೆಡ್ಡಿ ಉಳ್ಳೆಸೂಗೂರ, ಡಾ.ಎಸ್.ಬಿ.ಕಾಮರೆಡ್ಡಿ, ಶ್ರೀನಿವಾಸರೆಡ್ಡಿ ಚನ್ನೂರು, ಮಲ್ಲಣಗೌಡ ಹತ್ತಿಕುಣಿ, ಮಹೇಶ ಆನೆಗುಂದಿ, ಚಂದ್ರಶೇಖರಗೌಡ ಮಾಗನೂರ, ನಾಗರತ್ನ ಕುಪ್ಪಿ, ಸ್ನೇಹಾ ಪಾಟೀಲ, ಮಂಜುಳಾ ಗೂಳಿ, ರಾಚನಗೌಡ ಮುದ್ನಾಳ, ಸೋಮಶೇಖರ ಮಣ್ಣೂರ, ಬಸ್ಸುಗೌಡ ಬಿಳ್ಹಾರ, ಚನ್ನಾರೆಡ್ಡಿ ಬಿಳ್ಹಾರ, ಶರಣಪ್ಪಗೌಡ ಕೌಳೂರು, ಉಮೇಶರೆಡ್ಡಿ ದದ್ದಲ್, ಮಾಣಿಕರೆಡ್ಡಿ ಕುರಕುಂದಿ, ಬಸರೆಡ್ಡಿ ಅನಪುರ, ಸಿದ್ರಾಮರೆಡ್ಡಿ ಕೌಳೂರ, ಡಾ.ಸಿ.ಎಂ.ಪಾಟೀಲ, ಬಸವರಾಜ ಚಂಡ್ರಿಕಿ, ರಮೇಶ ದೊಡ್ಮನಿ, ಶಶಿಧರ್‌ರೆಡ್ಡಿ ಹೊಸಳ್ಳಿ, ಸಿದ್ದರಾಜ ಪಾಟೀಲ, ಮಲ್ಲಣಗೌಡ ಕೌಳೂರು, ಸಿದ್ದು ಕಾಮರೆಡ್ಡಿ ಚಟ್ನಳ್ಳಿ, ಶಿವಣ್ಣಗೌಡ ಗುಳಬಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.