ADVERTISEMENT

ಕೆಂಭಾವಿ; ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 15:22 IST
Last Updated 12 ನವೆಂಬರ್ 2019, 15:22 IST
ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಪುರಸಭೆ ಮಾಜಿ ಅಧ್ಯಕ್ಷ ದೇವಪ್ಪ ಮ್ಯಾಗೇರಿ ಚಾಲನೆ ನೀಡಿದರು
ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಪುರಸಭೆ ಮಾಜಿ ಅಧ್ಯಕ್ಷ ದೇವಪ್ಪ ಮ್ಯಾಗೇರಿ ಚಾಲನೆ ನೀಡಿದರು   

ಕೆಂಭಾವಿ: ‘ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಲ್ಲೂ ಪ್ರವಾಸಕ್ಕೆ ಹೋಗಿ ದೇಶ ಸುತ್ತಬೇಕು ಎಂಬುವ ಕನಸುಗಳಿರುತ್ತವೆ. ಆರ್ಥಿಕತೆ ಕಾರಣಕ್ಕೆ ಅದು ಸಾಧ್ಯವಾಗುವುದಿಲ್ಲ. ಮಕ್ಕಳ ಕನಸನ್ನು ಕರ್ನಾಟಕ ದರ್ಶನ ಪ್ರವಾಸ ನನಸಾಗಿಸಲಿದೆ’ ಎಂದು ಪುರಸಭೆ ಮಾಜಿ ಅಧ್ಯಕ್ಷ ದೇವಪ್ಪ ಮ್ಯಾಗೇರಿ ಹೇಳಿದರು.

ಯಾದಗಿರಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ದೇಶ ಸುತ್ತು ಕೋಶ ಓದು ಎಂದು ಹಿರಿಯರು ಹೇಳಿದ್ದಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ತಂದಿದೆ ಎಂದರು.

ADVERTISEMENT

ಪುರಸಭೆ ಸದಸ್ಯ ಮಹಿಪಾಲರೆಡ್ಡಿ ದಿಗ್ಗಾವಿ, ಗುರು ಕುಂಬಾರ, ಸೋಫಿ ಶರಮತ್ ನಾಶಿ, ದುರ್ಗಪ್ಪ ವಡ್ಡರ, ಅಶೋಕ ಭಂಗ್, ರಂಗಪ್ಪ ವಡ್ಡರ, ಬಿಆರ್‌ಪಿ ಗುರುಸ್ವಾಮಿ ಮುದನೂರ, ಸಿಆರ್‌ಪಿ ಶ್ರೀಶೈಲ ಪಾಸವಾಡಿ, ಉಪ ಪ್ರಾಂಶುಪಾಲ ಕೆ.ಆರ್‌. ಪಾಟೀಲ, ಅನಿಲಕುಮಾರ, ಯಲ್ಲಣ್ಣ ಗೋನಾಳ, ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಕಿರಣಗಿ, ಶಿಕ್ಷಕರಾದ ಸುಭಾಷ ಎಚ್.ಸಿ, ಜಗದೀಶ ಕೆ, ಹಾಲಸ್ವಾಮಿ, ಶ್ರೀಶೈಲ ಸಾಲೋಡಿಗಿ ಹಾಗೂ ಮಲ್ಲಿಕಾರ್ಜುನ ಗುರಿಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.