ADVERTISEMENT

ಎಸ್‌ಎಸ್‌ಎಲ್‌ಸಿ: ಶಹಾಪುರ ತಾಲ್ಲೂಕಿಗೆ ಶೇ 52.33 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:42 IST
Last Updated 2 ಮೇ 2025, 14:42 IST
ಅಮನ್ ರಾಜ್‌ಅಹ್ಮದ್‌ (ಶೇ 99.4)
ಅಮನ್ ರಾಜ್‌ಅಹ್ಮದ್‌ (ಶೇ 99.4)   

ಶಹಾಪುರ: ಶುಕ್ರವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ತಾಲ್ಲೂಕಿಗೆ ಶೇ 52.33 ರಷ್ಟು ಫಲಿತಾಂಶ ಬಂದಿದೆ ಎಂದು ಬಿಇಒ ವೈ.ಎಸ್. ಹರಗಿ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಖಾಸಗಿ ಹಾಗೂ ಸರ್ಕಾರಿ ಪ್ರೌಢಶಾಲೆ ಸೇರಿ ಒಟ್ಟು 84 ಶಾಲೆಗಳಿವೆ. 2,356 ವಿದ್ಯಾರ್ಥಿಗಳು ಹಾಗೂ 2,473 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಅದರಲ್ಲಿ 1,044 (ಶೇ 44.31) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2,527 ವಿದ್ಯಾರ್ಥಿನಿಯರು (ಶೇ 59.97) ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನಲ್ಲಿ ಸಂತಪಾಲ್ ಪ್ರೌಢಶಾಲೆಗೆ ಸೊನ್ನ ಫಲಿತಾಂಶ ಬಂದಿದೆ. ಅಜೀಂ ಪ್ರೇಮಜಿ ಶಾಲೆಗೆ ಶೇ 100ರಷ್ಟು ಫಲಿತಾಂಶ ಬಂದಿದೆ.

ADVERTISEMENT

ಆದರ್ಶ ಶಾಲೆ ವಿದ್ಯಾರ್ಥಿಗಳು ಹ್ಯಾಟ್ರಿಕ್ ಸಾಧನೆ: ಶಹಾಪುರದ ಆದರ್ಶ ಶಾಲೆಯ ಮೂವರು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಅಮನ್ ರಾಜ್‌ ಅಹ್ಮದ್, ಪ್ರಗತಿ ಬ್ರಹ್ಮಾನಂದರಡ್ಡಿ, ಸಂಜನಾ ಮಹಾಂತಗೌಡ ಮೂವರು ವಿದ್ಯಾರ್ಥಿಗಳು ಕ್ರಮವಾಗಿ ಶೇ 99.4 ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಪ್ರಗತಿ (ಶೇ 99.4)
ಸಂಜನಾ (ಶೇ 99.4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.