ADVERTISEMENT

ಜಮೀನು, ಗ್ರಾಮಗಳು ಜಲಾವೃತ

ಶಹಾಪುರದ ನಾಗರಕೆರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 2:13 IST
Last Updated 27 ಸೆಪ್ಟೆಂಬರ್ 2020, 2:13 IST
ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಗ್ರಾಮದ ಭತ್ತದ ಗದ್ದೆಗಳು ನೆಲಕಚ್ಚಿವೆ
ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಗ್ರಾಮದ ಭತ್ತದ ಗದ್ದೆಗಳು ನೆಲಕಚ್ಚಿವೆ   

ಯಾದಗಿರಿ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಜಮೀನು, ಗ್ರಾಮಗಳು ಜಲಾವೃತವಾಗಿವೆ.ಹೊಲ, ಗದ್ದೆಗಳಿಗೆ ತೆರಳಿದ ರೈತರು ತಮ್ಮ ಗ್ರಾಮಕ್ಕೆ ತಿರುಗಿ ಬರಲಾರದೆ ಹಳ್ಳದ ಆಚೆಯಲ್ಲೇ ಸಿಲುಕಿಕೊಂಡ ಘಟನೆ ಅಲ್ಲಿಲ್ಲಿ ವರದಿಯಾಗಿದೆ.

ಕೃಷಿ ಚಟುವಟಿಕೆಗೆ ಎಂದು ಜಾನುವಾರುಗಳೊಂದಿಗೆ ಹೊಲ, ಗದ್ದೆಗಳಿಗೆ ತೆಳಿದ ಇಲ್ಲಿನ ರೈತರು ಮಳೆ ಹೆಚ್ಚಾಗಿದ್ದರಿಂದ ನೀರಿನ ಹರಿವು ಹೆಚ್ಚಾಗಿದ್ದರಿಂದ ವಾಪಸ್‌ ಬರಲು ಪರದಾಡಿದ್ದಾರೆ.

ಕೋಟಗೇರಾದಲ್ಲಿಯೂ ಹಳ್ಳದ ಸೇತುವೆ ಮುಳುಗಡೆಯಾಗಿದ್ದರಿಂದ ರೈತರು, ಸಾರ್ವಜನಿಕರು ಯಾದಗಿರಿಗೆ ಬರಲು ತೆರಳಲು ಹರಸಾಹಸಪಟ್ಟರು.

ADVERTISEMENT

ನಾಗರಕೆರೆಗೆ ಜಿಲ್ಲಾಧಿಕಾರಿ ಭೇಟಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಚರಬಸವೇಶ್ವರ ಸಂಸ್ಥಾನದ ಮುಂದಿರುವ ನಾಗರಕೆರೆಗೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ಅವರು ಭೇಟಿ ನೀಡಿ ಪರಿಶೀಲಿಸಿದರು.

ಅಲ್ಲಿನ ವ್ಯವಸ್ಥೆ ಕುರಿತು ತಹಶೀಲ್ದಾರ್‌ರಿಂದ ಮಾಹಿತಿ ಪಡೆದರು. ಸಾರ್ವಜನಿಕರು ಕೆರೆಯ ಹತ್ತಿರ ಹೋಗದಂತೆ ಮುಂಜಾಗ್ರತ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆರೆಯು ಮುಂಭಾಗದಲ್ಲಿ ಸುಮಾರು 5 ಸಾವಿರ ಮನೆಗಳಿದ್ದು ಯಾವುದೇ ಅಪಾಯ ಸಂಭವಿಸುವುದಿಲ್ಲ. ಆದರೂ ಸಾರ್ವಜನಿಕರು ಕೆರೆಯ ಹತ್ತಿರ ಹೋಗದಂತೆ ಮುಂಜಾಗ್ರತ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಕೆರೆಗೆ ಬೆಟ್ಟದಲ್ಲಿರುವ ತಾವರೆ ಕೆರೆಯಿಂದ ಹೆಚ್ಚಾದ ನೀರು ನಾಗರ ಕೆರೆಗೆ ಹರಿದು ಬರುತ್ತಿದ್ದು, ಕೆರೆ ತುಂಬಿ ಹೆಚ್ಚಾದ ನೀರನ್ನು ಪಕ್ಕದಲ್ಲಿರುವ ಒಂದು ನಾಲೆಯ ಮೂಲಕ ನೀರನ್ನು ಹೊರ ಬಿಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಉಪವಿಭಾಗಾಧಿಕಾರಿ ಶಂಕರಗೌಡ ಎಸ್. ಸೋಮನಾಳ, ಶಹಾಪುರ ತಾಲ್ಲೂಕಿನ ತಹಶೀಲ್ದಾರ್ ಜಗನಾಥರಡ್ಡಿ, ನಗರಸಭೆಯ ಎಂಜಿನಿಯರ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಶಂಕರ ರುಬಿಕರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶರಣಪ್ಪ ಪೂಜಾರ, ಎಂಜಿನಿಯರ್‌ಗಳಾದ ಕಳಕಯ್ಯ ಸ್ವಾಮಿ ಸೇರಿ ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.