ADVERTISEMENT

ಶಹಾಪುರ: ಆರೋಪಿಗಳ ಗಲ್ಲು ಶಿಕ್ಷೆಗೆ ಆಗ್ರಹ

ಕನ್ಹಯ್ಯ ಲಾಲ್ ಹತ್ಯೆ ಪ್ರಕರಣ, ಹಿಂದೂ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:22 IST
Last Updated 3 ಜುಲೈ 2022, 2:22 IST
ಕನ್ಹಯ್ಯ ಲಾಲ್ ಹತ್ಯೆಮಾಡಿದವರನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಹುಣಸಗಿಯಲ್ಲಿ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು
ಕನ್ಹಯ್ಯ ಲಾಲ್ ಹತ್ಯೆಮಾಡಿದವರನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಹುಣಸಗಿಯಲ್ಲಿ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು   

ಹುಣಸಗಿ: ‘ಕನ್ಹಯ್ಯಲಾಲ್ ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ವಿಶ್ವ ಹಿಂದೂ ಪರಿಷತ್ತು ಹಾಗೂ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೆಳಗ್ಗೆ 10.30ಕ್ಕೆ ಮಹಾಂತಸ್ವಾಮಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ವೃತ್ತದವರೆಗೂ ಆಗಮಿಸಿ ಕೆಲ ಹೊತ್ತು ಮಾನವ ಸರಪಣಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು.

ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ಅರಳಿಗಿಡದ್ ಮಾತನಾಡಿ, ‘ದೇಶ ವಿರೋಧಿ ಶಕ್ತಿಗಳು ಹಿಂದೂ ಸಮಾಜದವರನ್ನು ಬರ್ಬರವಾಗಿ ಹತ್ಯೆಮಾಡುವ ಮೂಲಕ ಭಯೋತ್ಪಾದನೆ ಸೃಷ್ಟಿಸಿಐಕ್ಯತೆಗೆ ಧಕ್ಕೆ ತರುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಜಗದೀಶ ಚೌರಾ ಅವರಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು.

ಭಯೋತ್ಪಾದಕರ ಪ್ರತಿಕೃತಿಯನ್ನು ದಹನ ಮಾಡಲಾಯಿತು.

ಮೇಲಪ್ಪ ಗುಳಗಿ, ಬಸವರಾಜ ವೈಲಿ, ಡಾ. ಹೆಚ್. ವೀರಭದ್ರಗೌಡ, ನೀಲಕಂಠಸ್ವಾಮಿ ವಿರಕ್ತಮಠ, ಕಾಂತು ತೆಗ್ಗೆಳ್ಳಿ, ವಿನೋದ ದೊರೆ, ಆನಂದ ಬಾರಿಗಿಡದ, ಸಂಗಮೇಶ ಸಜ್ಜನ, ಬಸವರಾಜ ಮಾಳನೂರ, ದೇವು ಬೈಚಬಾಳ, ಮಲ್ಲಯ್ಯಸ್ವಾಮಿ ನಂದಿಕೋಲಮಠ, ನಾಗಯ್ಯಸ್ವಾಮಿ ದೇಸಾಯಿಗುರು, ರಮೇಶ ಮೀರಜಕರ್, ಜಿತೇಶ ರಾಜಪುರೋಹಿತ, ನೆನಾರಾಮ್, ಶರಣು ಮಲ್ಲಾಬಾದಿ, ಪ್ರಶಾಂತ ಹಿರೇಮಠ,ಮಹೇಶ ಸ್ಥಾವರಮಠ, ರಾಜು ಮಲಗಲದಿನ್ನಿ, ವಿಜಯಕುಮಾರ್ ಬಂಡೋಳಿ, ಗುಂಡು ಗೆದ್ದಲಮರಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ವರ್ತಕರು ಅಪಾರ ಸಂಖ್ಯೆಯಲ್ಲಿ
ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.