ADVERTISEMENT

‘ಸ್ಕೌಟ್ಸ್‌ನಿಂದ ಸೇವಾ ಮನೋಭಾವ’

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 20:24 IST
Last Updated 22 ಜುಲೈ 2019, 20:24 IST
ಶಹಾಪುರದ ದಿಗ್ಗಿ ಸಂಗಮನಾಥ ದೇವಸ್ಥಾನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮಟ್ಟದ 7 ದಿನಗಳ ಮೂಲ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ಮಾತನಾಡಿದರು
ಶಹಾಪುರದ ದಿಗ್ಗಿ ಸಂಗಮನಾಥ ದೇವಸ್ಥಾನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮಟ್ಟದ 7 ದಿನಗಳ ಮೂಲ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ಮಾತನಾಡಿದರು   

ಯಾದಗಿರಿ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಕ್ಕಳಲ್ಲಿ ಸೇವಾ ಮನೋಭಾವದೊಂದಿಗೆ ಶಿಸ್ತು ಸಂಯಮ, ದೇಶಭಕ್ತಿ ಬೋಧಿಸುವ ಗುರಿ ಹೊಂದಿದೆ ಎಂದು ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ಹೇಳಿದರು.

‌ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಘಟಕ ಹಾಗೂ ಶಹಾಪುರ ಘಟಕದ ಸಹಯೋಗದೊಂದಿಗೆ ಶಹಾಪುರದ ದಿಗ್ಗಿ ಸಂಗಮನಾಥ ದೇವಸ್ಥಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 7 ದಿನಗಳ ಮೂಲ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ಕೈಂಕರ್ಯ ಕೈಗೊಳ್ಳಬೇಕೆಂದು ಕರೆ ನೀಡಿದರು.

ADVERTISEMENT

ಜಿಲ್ಲಾ ಸಂಸ್ಥೆಯ ಗೈಡ್ಸ್ ವಿಭಾಗದ ಆಯುಕ್ತೆ ನಾಗರತ್ನಾ ಅನಪುರ ಮಾತನಾಡಿ,‘7 ದಿನಗಳ ಶಿಬಿರದಲ್ಲಿ ಸ್ಕೌಟ್ಸ್ ಗೈಡ್ಸ್ ಉದ್ದೇಶಗಳನ್ನು ಅಳವಡಿಸಿಕೊಂಡು ಮಕ್ಕಳು ಜೀವನದಲ್ಲಿ ಮಹತ್ತರ ಬದಲಾವಣೆ ತರಲು ಶ್ರಮಿಸಬೇಕು’ ಎಂದು ಕರೆ ನೀಡಿದರು.

ಶಿಬಿರದ ನಾಯಕಿ ಭಾಗೀರಥಿ ದೇಶಭಕ್ತಿಯ ಗೀತೆ ಹಾಡಿದರು. ಸ್ಥಳೀಯ ಸಂಸ್ಥೆ ಅಧ್ಯಕ್ಷ ಶಿವರಾಜ ದೇಶಮುಖ, ಜಿಲ್ಲಾ ಸಂಸ್ಥೆಯ ಸ್ಕೌಟ್ಸ್ ಕಮಿಷನರ್ ಪ್ರೊ.ಸಿ.ಎಂ.ಪಟ್ಟೇದಾರ, ಶಿಬಿರದ ನಾಯಕ ಪೀರಪ್ಪ, ರಚನಾ ತಳವಾರ, ಅನಿಲಕುಮಾರ, ಶಿಬಿರದ ಸಂಘಟಕ ಜಿಲ್ಲಾ ಕಾರ್ಯುದರ್ಶಿ ರಾಘವೇಂದ್ರ, ಪ್ರಭುದೇವ ಅಂಗಡಿ, ಜಿಲ್ಲಾ ಉಪಾಧ್ಯಕ್ಷ ಸುಧಾಕರ ಗುಡಿ, ಯಾದಗಿರಿ ತಾಲ್ಲೂಕು ಅಧ್ಯಕ್ಷ ಬಸವರೆಡ್ಡಿ ಮಾಲಿ ಪಾಟೀಲ ಪಾಲ್ಗೊಂಡಿದ್ದರು.

ಜಿಲ್ಲಾ ಸಂಘಟಕಿ ನಾಗರತ್ನಾ ಪಾಟೀಲ ಸ್ವಾಗತಿಸಿದರು. ಸುರಪುರ ತಾಲ್ಲೂಕು ಕಾರ್ಯದರ್ಶಿ ರಾಜಶೇಖರ ದೇಸಾಯಿ ವಂದಿಸಿದರು. ಶಹಾಪುರ ತಾಲ್ಲೂಕು ಕಾರ್ಯದರ್ಶಿ ಬಸವರಾಜ ಗೋಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.