ADVERTISEMENT

ಕೈಗಾರಿಕೆ ಅಭಿವೃದ್ಧಿಗೆ ಶರಣಭೂಪಾಲ ರೆಡ್ಡಿ ಮನವಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 15:55 IST
Last Updated 1 ಸೆಪ್ಟೆಂಬರ್ 2020, 15:55 IST
ಯಾದಗಿರಿಗೆ ಆಗಮಿಸಿದ್ದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ ಸ್ವಾಗತಿಸಿ ಸನ್ಮಾನಿಸಿದರು
ಯಾದಗಿರಿಗೆ ಆಗಮಿಸಿದ್ದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ ಸ್ವಾಗತಿಸಿ ಸನ್ಮಾನಿಸಿದರು   

ಯಾದಗಿರಿ: ನಗರಕ್ಕೆ ಆಗಮಿಸಿದ್ದ ಕೈಗಾರಿಕಾಸಚಿವ ಜಗದೀಶ್ ಶೆಟ್ಟರ ಅವರನ್ನುನಗರದ ರಾಚೋಟಿ ವೀರಣ್ಣ ದೇವಸ್ಥಾನದ ಬಳಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ಸ್ವಾಗತಿಸಿ ಸನ್ಮಾನಿಸಿದರು.

ನಂತರ ಸಚಿವರೊಂದಿಗೆ ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ 3,300 ಎಕರೆ ಜಮೀನು ಹೊಂದಿರುವ ಪ್ರದೇಶಕ್ಕೆವಿಶೇಷ ಕಾಯಕಲ್ಪ ನೀಡಬೇಕು.ಮುಂದಿನ ದಿನಗಳಲ್ಲಿ ಉದ್ದಿಮೆಗಳು ಆರಂಭವಾದ ನಂತರ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈವೇಳೆಜಿಲ್ಲಾ ಉಸ್ತುವಾರಿಸಚಿವ ಪ್ರಭು ಬಿ. ಚವ್ಹಾಣ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ನಾಗರತ್ನಾ ಕುಪ್ಪಿ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಲಲಿತಾ ಅನಪುರ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರು, ಜಿಲ್ಲಾ ಪ್ರಧಾನಿಕಾರ್ಯದರ್ಶಿ ದೇವಿಂದ್ರನಾಥ ನಾದ, ದೇವರಾಜ ನಾಯಕ, ಉಪಾಧ್ಯಕ್ಷ ಚೆನ್ನುಗೌಡ ಬಿರಾಳ, ರವಿ ಮಾಲಿಪಾಟೀಲ, ವೀಣಾ ಮೋದಿ, ಸುನಿತಾ ಚವ್ಹಾಣ, ಮಾಧ್ಯಮ ಪ್ರಮುಖ ವೀರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಿ, ರಮೇಶ ಬದ್ದೇಪಲ್ಲಿ, ಮಲ್ಲುಗೌಡ ಗುರುಸುಣಿಗಿ, ಗುರು ದಂಡಗುಂಡ, ಮಲ್ಲು ಚಾಪಲ, ಶಕುಂತಲಾ, ಯುವ ಮೋರ್ಚಾ ಅಧ್ಯಕ್ಷ ಮೊನೇಶ ಬೆಳಗೇರಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.