ADVERTISEMENT

ಕೃಷಿಯಲ್ಲಿ ನೀರಿನ ಮಿತ ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 2:58 IST
Last Updated 7 ಸೆಪ್ಟೆಂಬರ್ 2022, 2:58 IST
ಹುಣಸಗಿ ತಾಲ್ಲೂಕಿನ ಚನ್ನೂರು ಗ್ರಾಮದಲ್ಲಿ ನಡೆದ ಬಲರಾಮ ಜಯಂತಿಯಲ್ಲಿ ಕೃಷಿ ವಿಜ್ಞಾನಿ ಶಾಮರಾವ ಕುಲಕರ್ಣಿ ಮಾತನಾಡಿದರು
ಹುಣಸಗಿ ತಾಲ್ಲೂಕಿನ ಚನ್ನೂರು ಗ್ರಾಮದಲ್ಲಿ ನಡೆದ ಬಲರಾಮ ಜಯಂತಿಯಲ್ಲಿ ಕೃಷಿ ವಿಜ್ಞಾನಿ ಶಾಮರಾವ ಕುಲಕರ್ಣಿ ಮಾತನಾಡಿದರು   

ಪ್ರಜಾವಾಣಿ ವಾರ್ತೆ

ಹುಣಸಗಿ: ‘ಶುದ್ಧಕುಡಿಯುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೃಷಿಯಲ್ಲಿ ಮಿತವಾಗಿ ಬಳಕೆ ಮಾಡಬೇಕು’ ಎಂದು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ವಿಜ್ಞಾನಿ ಶಾಮರಾವ ಕುಲಕರ್ಣಿ ಹೇಳಿದರು.

ತಾಲ್ಲೂಕಿನ ಚನ್ನೂರು ಗ್ರಾಮದ ಭೋಜಪ್ಪಗೌಡ ಪಾಟೀಲ ಅವರ ತೋಟದಲ್ಲಿ ಭಾರತೀಯ ಕಿಸಾನ್ ಸಂಘ ಆಯೋಜಿಸಿದ್ದ ಬಲರಾಮ ಜಯಂತಿ, ನೀರಿನ ಮಿತ ಬಳಕೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿಯಾದ ನೀರಿನ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಆಧುನಿಕ ಬೇಸಾಯದಲ್ಲಿ ಅನವಶ್ಯಕ ಗೊಬ್ಬರ ಬಳಕೆ ಹೆಚ್ಚಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ‘ಏಕ ಬೆಳೆ ಪದ್ಧತಿ ಹಾಗೂ ಭತ್ತದ ಕೃಷಿಯಿಂದ ಸಾಕಷ್ಟು ಹಾನಿ ಅನುಭವಿಸುತ್ತಿದ್ದೇವೆ. ಇದರಿಂದ ಹೊರ ಬರಲು ಬೆಳೆ ಬದಲಾಯಿಸಬೇಕು. ಗೋವು ಸಾಕಾಣಿಕೆ, ಗೋಕೃಪಾಮೃತ, ಬೇವಿನ ಕಷಾಯ, ಸಾವಯವ ಕೃಷಿ, ತೋಟಗಾರಿಕೆ, ಹೈನುಗಾ ರಿಕೆಗೆ ಆದ್ಯತೆ ನೀಡಬೇಕು’ ಎಂದು ಸಲಹೆ ಮಾಡಿದರು.

ಕೃಷ್ಣಾ ನೀರು ಬಳಕೆದಾರ ಸಹಕಾರ ಸಂಘದ ಪ್ರಮುಖ ನಿಂಗನಗೌಡ ಗುಳಬಾಳ ಅವರು ನೀರಿನ ಮಿತ ಬಳಕೆ ಕುರಿತು ವಿವರಿಸಿದರು. ಭಗವಾನ್ ಬಲರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ರೈತ ಭೋಜಪ್ಪಗೌಡ ಪಾಟೀಲ, ಸಿದ್ದನಗೌಡ ಗುಡಗುಂಡ, ವಿರೇಶ ಪಾಟೀಲ, ನಂದನಗೌಡ ಹೊನ್ನಳ್ಳಿ, ಶರಣಗೌಡ ಕೊಡಗಾನೂರ, ಶ್ರೀಶೈಲ ಪರಮಗೊಂಡ, ಶಂಕರಗೌಡ, ಬಸನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.