ADVERTISEMENT

IIM | ಕ್ಯಾಟ್‌ ಪರೀಕ್ಷೆ –2019 ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 12:01 IST
Last Updated 4 ಜನವರಿ 2020, 12:01 IST
   

ಬೆಂಗಳೂರು: ದೇಶದ ಎಲ್ಲಾ ಐಐಎಂ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್) ಮತ್ತು ಬ್ಯುಸಿನೆಸ್ ಸ್ಕೂಲ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ದಾಖಲಾತಿ ಪರೀಕ್ಷೆ (ಕ್ಯಾಟ್)ಯ ಫಲಿತಾಂಶಶನಿವಾರ ಪ್ರಕಟವಾಗಿದೆ.

ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ವಿಭಾಗದ 10 ವಿದ್ಯಾರ್ಥಿಗಳು ಶೇ 100 ರಷ್ಟುಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಕ್ಯಾಟ್‌ ಪರೀಕ್ಷೆಯನ್ನುಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್–ಕೋಯಿಕೋಡ್‌ ನಡೆಸಿತ್ತು.

ಕ್ಯಾಟ್‌ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌https://iimcat.ac.inಗೆ ಲಾಗಿನ್‌ ಆಗಿ ತಮ್ಮ ಅಂಕಗಳನ್ನು ನೋಡಬಹುದು.

ADVERTISEMENT

ಕಳೆದ ನವೆಂಬರ್‌ 24ರಂದು ಕ್ಯಾಟ್‌ ಪರೀಕ್ಷೆ ನಡೆಸಲಾಗಿತ್ತು.

ದೇಶದ 20 ಐಐಎಂ ಹಾಗೂ ಎಫ್‌ಎಂಎಸ್, ಎಸ್‌ಪಿಜೆಐಎಂಆರ್, ಎಂಡಿಎಸ್, ಎನ್ಐಟಿಐಇ, ಟಿಎಪಿಎಂಐ ಸೇರಿ ದೇಶದ ಪ್ರಮುಖ 100 ಬ್ಯುಸಿನೆಸ್ ಸ್ಕೂಲ್‌ಗಳ ಪ್ರವೇಶಕ್ಕೆ ಕ್ಯಾಟ್ ಮೆರಿಟ್ ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.