ADVERTISEMENT

ಸಿಇಟಿ: ಶೇ 97ರಷ್ಟು ವಿದ್ಯಾರ್ಥಿಗಳು ಹಾಜರು

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 20:15 IST
Last Updated 17 ಜೂನ್ 2022, 20:15 IST
   

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿ.ಇ.ಟಿ) ಸುಗಮವಾಗಿ ನಡೆದಿದ್ದು, ಶೇ 97ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಒಟ್ಟು 2,16,559 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಭೌತವಿಜ್ಞಾನಕ್ಕೆ 2,10,962 ವಿದ್ಯಾರ್ಥಿಗಳು, ರಸಾಯನ ವಿಜ್ಞಾನಕ್ಕೆ 2,10,924 ವಿದ್ಯಾರ್ಥಿಗಳು ಹಾಜರಾಗಿದ್ದರು.

ಹೊರನಾಡು, ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ಶನಿವಾರ ಆಯ್ದ ಆರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.

ADVERTISEMENT

‘ಎಲ್ಲ ಪ್ರಶ್ನೆಗಳೂ ಎನ್‌ಸಿಇಆರ್‌ಟಿ ಚೌಕಿಟ್ಟಿನ ಒಳಗೆ ಇದ್ದವು. ರಸಾಯನ ವಿಜ್ಞಾನ ವಿಷಯದ ಪತ್ರಿಕೆಯಲ್ಲಿ ಪ್ರಶ್ನೆಗಳು ಸಮತೋಲನದಿಂದ ಕೂಡಿದ್ದವು. ಸಾಮಾನ್ಯ ವಿದ್ಯಾರ್ಥಿಯೂ ಉತ್ತರಿಸಬಹುದಾದ ಪ್ರಶ್ನೆಗಳಿದ್ದವು’ ಎಂದು ದೀಕ್ಷಾ ಸಂಸ್ಥಾಪಕ ಜಿ. ಶ್ರೀಧರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.