ADVERTISEMENT

ವಿದ್ಯಾರ್ಥಿ ವೇತನ: ಕೋಲ್‌ ಇಂಡಿಯಾ ಸ್ಕಾಲರ್‌ಷಿಪ್‌

ಕೋಲ್‌ ಇಂಡಿಯಾ ಸ್ಕಾಲರ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 1:11 IST
Last Updated 5 ಜೂನ್ 2023, 1:11 IST
   

ವಿವರ: ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿ ಪಡೆಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಕೋಲ್‌ ಇಂಡಿಯಾ ಲಿಮಿಟೆಡ್‌ ಕಂಪನಿ ‘ಇಡಬ್ಲ್ಯುಎಸ್‌ ಸ್ಕಾಲರ್‌ಷಿಪ್‌ 2023’ ರೂಪಿಸಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ವೃತ್ತಿಪರ ಶಿಕ್ಷಣ ಸಿಗುವಂತಾಗಬೇಕು ಎಂಬುದು ಸ್ಕಾಲರ್‌ಷಿಪ್‌ನ ಮುಖ್ಯ ಉದ್ದೇಶವಾಗಿದೆ.

ಅರ್ಹತೆ: ಪ್ರಸಕ್ತ ವರ್ಷದ ನವೆಂಬರ್ ತಿಂಗಳೊಳಗೆ ಮೊದಲ ವರ್ಷದ ಪದವಿಗೆ ಪ್ರವೇಶ ಪಡೆಯುವ 25 ವರ್ಷದೊಳಗಿನ ಬಿಪಿಎಲ್‌ ಕುಟುಂಬದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕಾಲೇಜುಗಳಲ್ಲಿ ಮೈನಿಂಗ್, ಎಲೆಕ್ಟ್ರಿಕಲ್, ಮೆಕಾನಿಕಲ್, ಸಿವಿಲ್, ಕಂಪ್ಯೂಟರ್–ಐಟಿ ಪರಿಸರ ವಿಜ್ಞಾನ, ಎಲೆಕ್ಟ್ರಾನಿಕ್ಸ್‌ ಆ್ಯಂಡ್ ಟೆಲಿಕಮ್ಯುನಿಕೇಷನ್ಸ್‌, ಐಐಟಿ, ಎನ್‌ಐಟಿ ಮತ್ತಿತರ ಎಂಜಿನಿಯರಿಂಗ್ ಕೋರ್ಸ್‌ ಕಲಿಯುತ್ತಿರಬೇಕು.

ಆರ್ಥಿಕ ನೆರವು: ಪೂರ್ಣ ಕೋರ್ಸ್‌ಗೆ ನಿಗದಿಪಡಿಸಿರುವ ಶುಲ್ಕವನ್ನು ನೀಡಲಾಗುತ್ತದೆ

ADVERTISEMENT

ಅರ್ಜಿ ಸಲ್ಲಿಕೆ ವಿಧಾನ: ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ವಿಳಾಸ: ಚೀಫ್ ಜನರಲ್ ಮ್ಯಾನೇಜರ್‌ (ಕಲ್ಯಾಣ), ಕೋಲ್ ಇಂಡಿಯಾ ಲಿ. ಕೋಲ್ ಭವನ್, 10, ನೇತಾಜಿ ಸುಭಾಷ್ ರೋಡ್, ಕೋಲ್ಕತ್ತಾ 700001, ದೂರವಾಣಿ ಸಂಖ್ಯೆ: (033)-22488099, ಫ್ಯಾಕ್ಸ್ ನಂಬರ್ : (033)-22313875/22135778

ಹೆಚ್ಚಿನ ಮಾಹಿತಿಗೆ: www.b4s.in/praja/EWST6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.