ADVERTISEMENT

ತಮಿಳುನಾಡಿನಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಿಲ್ಲ ಕಿಮ್ಮತ್ತು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2014, 19:30 IST
Last Updated 11 ಏಪ್ರಿಲ್ 2014, 19:30 IST

ಚೆನ್ನೈ (ಪಿಟಿಐ): ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡುವುದರಲ್ಲೂ ಲಿಂಗ ತಾರತಮ್ಯ ನಡೆದಿರು­ವುದು ತೀವ್ರ ಚರ್ಚೆಗೆ ಗ್ರಾಸ­ವಾಗಿದೆ. ಯಾವ ಪಕ್ಷವೂ ಮಹಿಳೆ­ಗೆ ಸಮಾನ ಅವಕಾಶ ನೀಡಿಲ್ಲ.

ಮಹಿಳಾ ಮೀಸಲಾತಿ ಮಸೂದೆಯ ಪ್ರಬಲ ಪ್ರತಿಪಾದಕ­ರಾದ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರು ತಮ್ಮ ಪಕ್ಷದಿಂದ ಇಬ್ಬರು ಮಹಿಳೆ­ಯರಿಗಷ್ಟೇ ಅವಕಾಶ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯಕ್ಕೆ ಒಬ್ಬ ಮಹಿಳೆಯೇ ಸಾಕಾಗಿದ್ದಾರೆ’ ಎಂದು ಪರೋಕ್ಷವಾಗಿ ಜಯಲಲಿತಾ ಅವರನ್ನು ಕುಟುಕಿ ವಿಷಯವನ್ನು ತೇಲಿಸಿದ್ದಾರೆ.

ಮುಖ್ಯಮಂತ್ರಿ ಜಯಲಲಿತಾ ಅವರೇ ಮುಖ್ಯಸ್ಥೆಯಾಗಿರುವ ಎಐಎಡಿಎಂಕೆ ಕೂಡ 39 ಸ್ಥಾನಗಳಲ್ಲಿ  ನಾಲ್ಕು ಕಡೆಗಳಲ್ಲಿ ಮಾತ್ರ ಮಹಿಳೆಯರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌, ಮೂವರು ಸ್ತ್ರೀಯರನ್ನಷ್ಟೇ ಕಣಕ್ಕಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.