ADVERTISEMENT

ಕಾಂಗ್ರೆಸ್‌ನವರು ಸೋಲುತ್ತೇವೆ ಎಂದಾಗ ಮತಯಂತ್ರದ ಬಗ್ಗೆ ದೋಷಾರೋಪ ಮಾಡುತ್ತಾರೆ: ಮೋದಿ

​ಪ್ರಜಾವಾಣಿ ವಾರ್ತೆ
Published 9 ಮೇ 2018, 14:17 IST
Last Updated 9 ಮೇ 2018, 14:17 IST
ಕಾಂಗ್ರೆಸ್‌ನವರು ಸೋಲುತ್ತೇವೆ ಎಂದಾಗ ಮತಯಂತ್ರದ ಬಗ್ಗೆ ದೋಷಾರೋಪ ಮಾಡುತ್ತಾರೆ: ಮೋದಿ
ಕಾಂಗ್ರೆಸ್‌ನವರು ಸೋಲುತ್ತೇವೆ ಎಂದಾಗ ಮತಯಂತ್ರದ ಬಗ್ಗೆ ದೋಷಾರೋಪ ಮಾಡುತ್ತಾರೆ: ಮೋದಿ   

ಚಿಕ್ಕಮಗಳೂರು: ಕಾಂಗ್ರೆಸ್‌ ನವರು ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಗೊತ್ತಾದಾಗ ಅದನ್ನು ಒಪ್ಪಿಕೊಳ್ಳುವುದಿಲ್ಲ, ಮತಯಂತ್ರದ ಬಗ್ಗೆ ದೋಷಾರೋಪ ಮಾಡುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ನಗರದಲ್ಲಿ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣಾ ಆಯೋಗ ವ್ಯವಸ್ಥಿತವಾಗಿ ಚುನಾವಣೆ ನಡೆಸುತ್ತಿದೆ. ಆಯೋಗದ ಕಾರ್ಯವೈಖರಿ ಬಗ್ಗೆ ವಿಶ್ವದ ಯಾವುದಾದರೂ ಸಂಸ್ಥೆಯವರು ಪ್ರಶಂಸೆ ವ್ಯಕ್ತಪಡಿಸಿದರೆ ಮೋದಿ ಅವರು ಆ ಸಂಸ್ಥೆ ಖರೀದಿಸಿದ್ದಾರೆ ಎಂದು ದೂಷಿಸಿಸುತ್ತಾರೆ. ಆಯೋಗವನ್ನೇ ಕಾಂಗ್ರೆಸ್ ದೂಷಿಸುತ್ತಿದೆ ಎಂದರು. ಮತಯಂತ್ರ ಸರಿ ಇಲ್ಲ , ಕಾಂಗ್ರೆಸ್ ಸರಿ ಇದೆ ಎಂದು ವಾದಿಸುತ್ತಾರೆ. ಕಾಂಗ್ರೆಸ್ ಪಕ್ಷ ಒಂದು ಕುಟುಂಬಕ್ಕಾಗಿ ದುಡಿಯುತ್ತಿದೆ ಎಂದು ಮೂದಲಿಸಿದರು.

ADVERTISEMENT

ಕೇಂದ್ರದಲ್ಲಿ 2004ರಿಂದ 10 ವರ್ಷ ಆಳ್ವಿಕೆ ಮಾಡಿ, ಈಗ ಒಂದಾಂದ ನಂತರ ಒಂದು ರಾಜ್ಯವನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ನಲ್ಲಿ ಪ್ರಜಾತಂತ್ರದ ಲಕ್ಷ್ಮಣಗಳು ಇಲ್ಲ ಎಂದು ಟೀಕಿಸಿದರು.

ಸಿಬಿಐ, ಸಿಎಜಿ, ಆರ್‌ಬಿಐ ಸಂಸ್ಥೆಗಳು ಸರಿ ಇಲ್ಲ ಎಂದು ಕಾಂಗ್ರೆಸ್ ಹೇಳುತ್ತದೆ. ಸೇನೆ ಕಾರ್ಯವೈಖರಿಯನ್ನೂ ದೂಷಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.