ADVERTISEMENT

‘11 ಮುಸ್ಲಿಮರ ಕೊಲೆ ಬಗ್ಗೆ ಮಾತಾಡಿ’

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:30 IST
Last Updated 6 ಮೇ 2018, 19:30 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಬೆಂಗಳೂರು: ಹಿಂದೂ ಕಾರ್ಯಕರ್ತರ ಕಗ್ಗೊಲೆಗಳ ಬಗ್ಗೆ ಪ್ರಸ್ತಾಪಿಸುವ ಬಿಜೆಪಿ, 11 ಮುಸ್ಲಿಮರ  ಹತ್ಯೆ ಪ್ರಕರಣಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಕೊಲೆಗಳನ್ನು ಮಾತ್ರ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಆದರೆ, ಸಂಘ ಪರಿವಾರದವರಿಂದ ಹತ್ಯೆಗೀಡಾದ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದರು.

ಈ ಕುರಿತ ಮಾಹಿತಿ ಒಳಗೊಂಡ ಕೈಪಿಡಿಯೊಂದನ್ನು ಭಾನುವಾರ ಬಿಡುಗಡೆ ಮಾಡಿದ ರಾಮಲಿಂಗಾರೆಡ್ಡಿ, 24 ಹಿಂದೂ(ಸಂಘ ಪರಿವಾರ) ಕೊಲೆ ಪ್ರಕರಣಗಳಲ್ಲಿ 12 ಕಾರ್ಯಕರ್ತರ ಕೊಲೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರಿಂದಲೇ ನಡೆದಿದೆ. ಉಳಿದ 12 ಪ್ರಕರಣಗಳಲ್ಲಿ ಹತ್ಯೆಗೆ ಪ್ರಮುಖ ಕಾರಣ ರಾಜಕೀಯ ದ್ವೇಷ, ಜಮೀನು ವ್ಯಾಜ್ಯ, ಇತ್ಯಾದಿ. ಈ ವಿಷಯದ ಬಗ್ಗೆಯೂ ಬಿಜೆಪಿ ಮಾತನಾಡುತ್ತಿಲ್ಲ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.