ADVERTISEMENT

ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

‘ಪ್ಯಾರ್ಗೆ ಆಗ್‌ಬುಟೈತೆ’
ಶೋಭಾಪ್ರಕಾಶ್ ನಿರ್ಮಿಸಿರುವ ‘ಪ್ಯಾರ್‌ಗೆ ಆಗ್‌ಬುಟೈತೆ’ ಚಿತ್ರ. ಕೋಮಲ್ ನಾಯಕರಾಗಿ ಅಭಿಯಿಸಿರುವ ಈ ಚಿತ್ರದ ನಾಯಕಿ ಪ್ರಾರ್ಥನಾ. ಕವಿನ್ ಬಾಲ ನಿರ್ದೇಶಕ. ಕವಿನ್ ಬಾಲ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಬಾಲಭರಣಿ ಛಾಯಾಗ್ರಹಣ, ಧರ್ಮತೇಜ ಸಂಗೀತ, ಸುರೇಶ್ ಅರಸ್ ಸಂಕಲನ, ಕೇಶವಾದಿತ್ಯ(ರಾಮಜೋಗಿಹಳ್ಳಿ) ಸಂಭಾಷಣೆ ಚಿತ್ರಕ್ಕಿದೆ.

‘ಲೂಸಿಯಾ‘
ಪವನ್‌ಕುಮಾರ್ ನಿರ್ದೇಶನ ಮತ್ತು ರಚನೆಯ ಚಿತ್ರ. ಸಿದ್ಧಾರ್ಥ್ ನುನಿ ಛಾಯಾಗ್ರಹಣ, ಪೂರ್ಣಚಂದ್ರತೇಜಸ್ವಿ ಸಂಗೀತ, ಸನತ್ ಸುರೇಶ್ ಮತ್ತು ಪವನ್‌ಕುಮಾರ್ ಸಂಕಲನ, ಹರ್ಷ, ಮುರಳಿ, ಸೌಮ್ಯ ಜಗನ್‌ಮೂರ್ತಿ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಕಾರ್ಯಕಾರಿ ನಿರ್ಮಾಪಕರು ಎಂ.ಕೆ. ಸುಬ್ರಹ್ಮಣ್ಯ. ನೀನಾಸಂ ಸತೀಶ್, ಶ್ರುತಿಹರಿಹರನ್, ಹಾರ್ದಿಕಾ ಶೆಟ್ಟಿ, ಅಚ್ಯುತ ಕುಮಾರ್, ಸಂಜಯ್, ಕೃಷ್ಣ, ರಿಷಬ್, ಬಾಲಾಜಿ ಮನೋಹರ್, ಆರ್ಯನ್, ಪೂರ್ಣಚಂದ್ರ, ಪ್ರಶಾಂತ್, ಭರತ್, ಮಹದೇವ್ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಕೊಡಗಿನತ್ತ ‘ಸಪ್ನೋಂಕಿರಾಣಿ’
ಇಂದ್ರಮ್ಮ ಗೋವಿಂದರಾಜು ನಿರ್ಮಿಸುತ್ತಿರುವ ಸಪ್ನೋಂಕಿ ರಾಣಿ’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಮುಗಿದಿದ್ದು ಕೊಡಗಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ.

ಎ.ಆರ್. ಬಾಬು ಚಿತ್ರದ ನಿರ್ದೇಶಕ. ಸೃಜನ್ ಲೋಕೇಶ್, ಅವಿನಾಶ್, ಶೋಭರಾಜ್, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ,  ಅಶೋಕ್, ಚೇತನ್ ಮತ್ತಿತರರು ಚಿತ್ರದಲ್ಲಿ ನಟಿಸುತ್ತಿದ್ದಾರೆ. .ಎಸ್. ವಾಲಿ ಛಾಯಾಗ್ರಹಣ, ಧರ್ಮ ವಿಶ್ ರಾಗ ಸಂಯೋಜನೆ, ಸುರೇಶ್ ಸಂಕಲನ, ಮಾಸ್ ಮಾದ ಸಾಹಸ ಚಿತ್ರಕ್ಕಿದೆ. ಯೋಗರಾಜ್ ಭಟ್, ವಿ. ನಾಗೇಂದ್ರ ಪ್ರಸಾದ್, . ಮನೋಹರ್, ರವಿಕಿರಣ್ ಸಾಹಿತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT