ADVERTISEMENT

‘ಛೇರ್ಮನ್’ ಹಾಡು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST

ಹಳ್ಳಿ ರಾಜಕೀಯದ ಹಿನ್ನೆಲೆಯಲ್ಲಿ ಯುವಜನರಿಗೆ ಸಂದೇಶ ಹೇಳುವ ಚಿತ್ರ ‘ಛೇರ್ಮನ್’ ಬಿಡುಗಡೆಗೆ ಸಿದ್ಧವಾಗಿದೆ. ಬಸವರಾಜ್ ಹಿರೇಮಠ ಈ ಸಿನಿಮಾ ನಿರ್ದೇಶಿಸಿದ್ದಾರೆ. ಈ ಹಿಂದೆ ‘ಅಮರೇಶ್ವರ ಮಹಾತ್ಮೆ’ ಎಂಬ ಚಿತ್ರ ನಿರ್ಮಾಣ ಮಾಡಿದ್ದ ಬಸವರಾಜ್ ಹಿರೇಮಠ ಅವರು ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ರಾಯಚೂರು, ಬೆಂಗಳೂರು, ಮಂಗಳೂರು ಹಾಗೂ ಹುಬ್ಬಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕಳೆದ ವಾರವಷ್ಟೇ ಈ ಚಿತ್ರದ ಟೈಟಲ್ ಸಾಂಗ್‌ಅನ್ನು ‘ಮರಿ ಟೈಗರ್’ ಖ್ಯಾತಿಯ ವಿನೋದ್ ಪ್ರಭಾಕರ್ ಬಿಡುಗಡೆ ಮಾಡಿದರು. ‘ಯಕ್ಕಾ ನಿನ್ನ ಮಗಳು ಚಿಕ್ಕವಳಾಗಲ್ವಾ...’ ಹಾಡಿನ ಖ್ಯಾತಿಯ ಶಿವು ಬೆರಗಿ ಈ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಬರೆದಿದ್ದಾರೆ.

ದಾಕ್ಷಾಯಣಿ ಮೂವಿ ಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎಸ್. ವಿಜಯ್ ಅವರ ಛಾಯಾಗ್ರಹಣವಿದ್ದು, ಶಿವಪರ್ವ ಸಂಗೀತ ಸಂಯೋಜಿಸಿದ್ದಾರೆ. ಹಲಗೂರು ವೆಂಕಟೇಶ್ ಸಂಭಾಷಣೆ, ಶಿವು ಬೆರಗಿ ಸಾಹಿತ್ಯ, ಅಕುಲ್ ಅವರ ನೃತ್ಯ ನಿರ್ದೇಶನವಿದೆ.

ADVERTISEMENT

ರಘುನಾಥ್ ಎಲ್. ಸಂಕಲನವಿದೆ. ಮನು, ರಾಜಾಶ್ರೀ, ಅನು, ಮುತ್ತು, ಬಾಲರಾಜ್ ವಾಡಿ, ಕುಶನ್ ಗೌಡ, ಗವಿ ಕನಕಗಿರಿ, ಶಿವಕುಮಾರ್ ಆರಾಧ್ಯ, ಆಶಾನಾಯಕ್, ಲಿಖಿತೇಶ್, ಪ್ರೇಮಾ, ಬಸವರಾಜ್ ತಿರ್ಲಾಪುರ್, ಮಾಸ್ಟರ್ ಮಂಜುನಾಥ್‌ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.