ADVERTISEMENT

ಜೇಮ್ಸ್ ಸೆವನ್

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 19:30 IST
Last Updated 28 ಡಿಸೆಂಬರ್ 2017, 19:30 IST

ಕೊಲೆ ಪ್ರಕರಣದ ಕಥೆ

‘ಜೇಮ್ಸ್ ಸೆವನ್’ ಎನ್ನುವ ಶೀರ್ಷಿಕೆ ಕೇಳಿದ ತಕ್ಷಣ, ಇದು ಜೇಮ್ಸ್ ಬಾಂಡ್ ಸಿನಿಮಾ ಎಂದು ಭಾವಿಸಬಹುದು. ಇದು ಸಸ್ಪೆನ್ಸ್, ಥ್ರಿಲ್ಲರ್ ಕಥನ ಹೊಂದಿರುವ ಸಿನಿಮಾ.

ಐವರು ಸ್ನೇಹಿತರು ಮೋಜು ಮಾಡಲು ಹಳ್ಳಿಯ ಮನೆಗೆ ಹೋದಾಗ, ಬೆಳಗಾಗುವುದರೊಳಗೆ ಗೆಳತಿಯ ಕೊಲೆಯಾಗಿರುತ್ತದೆ. ಅದು ಯಾವ ಕಾರಣಕ್ಕೆ ಆಗಿರುತ್ತದೆ, ಅಪರಾಧಿಯನ್ನು ಜೇಮ್ಸ್ ಸೆವನ್ ಹೇಗೆ ಕಂಡು ಹಿಡಿಯುತ್ತಾನೆ ಎಂಬುದು ಈ ಸಿನಿಮಾದ ಕಥೆ.

ADVERTISEMENT

ರಾಯಲ್‍ ಅರವಿಂದ್ ಕಥೆ ಬರೆದು, ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು ಮತ್ತು ಎಂ.ಡಿ.ಕೌಶಿಕ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆದಿದೆ. ಮಿಥುನ್‍ ಚಂದ್ರಶೇಖರ್ ಮೊದಲ ಬಾರಿಗೆ ಹಿರಿತೆರೆ ನಿರ್ದೇಶಕರಾಗಿ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಅರ್ಪಿತಾ, ತೇಜು ಪೊನ್ನಪ್ಪ, ರವಿಕಿರಣ್, ಪೃಥ್ವಿ, ವಂದನಾ, ವಿದ್ಯಾ, ರಂಭಾ ತಾರಾಗಣದಲ್ಲಿ ಇದ್ದಾರೆ. ಎರಡು ಹಾಡುಗಳಿಗೆ ಸಂಗೀತ ಒದಗಿಸಿರುವವರು ಎ.ಟಿ.ರವೀಶ್. ಛಾಯಗ್ರಹಣ ಚಂದ್ರು ಬೆಳವಂಗಲ ಮತ್ತು ನಾಗಶೆಟ್ಟಿ ಅವರದ್ದು. 60 ನಿಮಿಷಗಳ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗುವ ಸಾದ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.