ADVERTISEMENT

ಪಗಡೆಯಾಟವಯ್ಯ!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

`ಪಗಡೆ~ಯಾಟದಲ್ಲಿ ಗೆದ್ದಷ್ಟೇ ಖುಷಿಯಿಂದ ಕುಳಿತಿದ್ದರು ನಿರ್ದೇಶಕ ಪುರುಷೋತ್ತಮ್. ಆಟವಿನ್ನೂ ಪೂರ್ಣಗೊಂಡಿಲ್ಲ ಎಂಬ ಸಣ್ಣ ದುಗುಡುವೂ ಅವರನ್ನು ಆವರಿಸಿತ್ತು.
 
ಸಾಲು ಸಾಲು ಭಕ್ತಿ ಪ್ರಧಾನ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಅವರಿಗೆ ಪ್ರೀತಿ ಪ್ರೇಮದ ಪಾಠವೊಪ್ಪಿಸುವ ಕೆಲಸ ಹೊಸತು. `ಪಗಡೆ~ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡದ ಸಮೇತ ಸುದ್ದಿಮಿತ್ರರೊಂದಿಗೆ ಅವರು ಎದುರಾದರು.

ಮೂರು ಹಾಡುಗಳಷ್ಟೇ ಬಾಕಿ ಉಳಿದಿವೆ. ಕೇರಳ, ಮಡಿಕೇರಿ ಮತ್ತು ಮೈಸೂರು ಸುತ್ತಮುತ್ತ ಈ ಹಾಡುಗಳನ್ನು ಚಿತ್ರೀಕರಿಸುತ್ತೇವೆ ಎಂದು ಚಿತ್ರದ ಪ್ರಗತಿಯ ಬಗ್ಗೆ ವಿವರಿಸಿದರು. ಯೋಜನೆಯಂತೆ 35 ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತಿದ್ದೇವೆ ಎಂದ ಅವರು, ಚಿತ್ರ ಅತ್ಯಂತ ವಿಭಿನ್ನ ಪ್ರೇಮಕಥೆಯನ್ನೊಳಗೊಂಡಿದೆ ಎಂದರು.

ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿರುವ ವಿಶ್ವಾಸ್ ಭಾರದ್ವಾಜ್ `ಪಗಡೆ~ ಮೂಲಕ ನಾಯಕರಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಒಳ್ಳೆ ಹೆಸರು ಮತ್ತು ಅವಕಾಶ ತಂದುಕೊಟ್ಟಿದೆ. ಹಿರಿಯ ನಟರ ಜೊತೆ ನಟಿಸಿದ ಅನುಭವ ಖುಷಿ ಕೊಟ್ಟಿದೆ ಎನ್ನುವುದು ವಿಶ್ವಾಸ್ ಮಾತು.

`ಮರೆಯದಿರು~ ಮತ್ತು `ಸೆಂಟ್ರಲ್ ಜೈಲ್~ ಎಂಬ ಚಿತ್ರಗಳಲ್ಲಿ ನಟಿಸಿರುವ ಗಮ್ಯಾ ಚಿತ್ರದ ನಾಯಕಿ. ಚಿತ್ರದಲ್ಲಿ ಅವರದು ಕಾಲೇಜು ಹುಡುಗಿಯ ಪಾತ್ರವಂತೆ. ಚಿತ್ರದ ನಿರ್ಮಾಪಕ ಎಚ್.ವಿ.ಅಣ್ಣಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.  
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.