ADVERTISEMENT

ಪೊರ್ಕಿ ಹಾಡುಗಳು ಅಮ್ಮನಿಗೆ!

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2016, 19:30 IST
Last Updated 25 ಫೆಬ್ರುವರಿ 2016, 19:30 IST
ಪೊರ್ಕಿ ಹಾಡುಗಳು ಅಮ್ಮನಿಗೆ!
ಪೊರ್ಕಿ ಹಾಡುಗಳು ಅಮ್ಮನಿಗೆ!   

ಒಂದಷ್ಟು ದಿನಗಳಿಂದ ಮಾಧ್ಯಮದಲ್ಲಿ ನಾಪತ್ತೆಯಾಗಿದ್ದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮತ್ತೆ ಪತ್ರಕರ್ತರ ಎದುರು ಪ್ರತ್ಯಕ್ಷವಾಗಿದ್ದಾರೆ. ಈ ಬಾರಿ ತಮ್ಮ ಹೊಸ ಚಿತ್ರ ‘ಪೊರ್ಕಿ ಹುಚ್ಚ ವೆಂಕಟ್’ ಹಾಡುಗಳನ್ನು ಬಿಡುಗಡೆ ಮಾಡುವುದು ಅವರ ಉದ್ದೇಶವಾಗಿತ್ತು.

ತಾಯಿ ತನ್ನನ್ನು ಪ್ರೀತಿಯಿಂದ ‘ಪೊರ್ಕಿ’ ಎಂದು ಕರೆಯುತ್ತಿದ್ದುದಕ್ಕೆ ಚಿತ್ರದ ಶೀರ್ಷಿಕೆಯಲ್ಲಿ ‘ಪೊರ್ಕಿ’ ಎನ್ನುವ ವಿಶೇಷಣವನ್ನು ಅವರು ಸೇರಿಸಿಕೊಂಡಿದ್ದಾರೆ. ಅಂದಹಾಗೆ, ಚಿತ್ರದ ಹಾಡುಗಳನ್ನು ಅವರು ತಮ್ಮ ತಾಯಿಗೆ ಅರ್ಪಿಸಿದ್ದಾರೆ.

ಸದ್ಯ ಚಿತ್ರದ ಒಂದು ಹಾಡಿನ ಚಿತ್ರೀಕರಣ ಮುಗಿಸಿರುವ ವೆಂಕಟ್, ಕೆಲವೇ ದಿನಗಳಲ್ಲಿ ಉಳಿದ ಹಾಡು ಮತ್ತು ದೃಶ್ಯಗಳನ್ನು ಚಿತ್ರೀಕರಿಸುವುದಾಗಿ ಹೇಳಿದರು. ಚಿತ್ರದಲ್ಲಿ ಆರು ಹಾಡುಗಳಿದ್ದು, ಸತೀಶ್ ಬಾಬು ಸಂಗೀತ ಸಂಯೋಜಿಸಿದ್ದಾರೆ. ತಾಯಿ ಪ್ರೀತಿಯನ್ನು ಬಿಂಬಿಸುವ ಒಂದು ಹಾಡನ್ನೂ ಚಿತ್ರದಲ್ಲಿ ಅಳವಡಿಸಿದ್ದಾರೆ. ಎಲ್ಲ ಹಾಡುಗಳಿಗೆ ವೆಂಕಟ್ ಅವರೇ ಸಾಹಿತ್ಯ ರಚಿಸಿದ್ದು, ವೆಂಕಟ್, ರಾಜೇಶ್ ರಾಮನಾಥ್, ರಾಜೇಶ್ ಕೃಷ್ಣನ್ ಮತ್ತು ಅನುರಾಧಾ ಭಟ್ ಹಾಡಿದ್ದಾರೆ.

‘ನನ್ನ ಬಗೆಗಿನ ಎಲ್ಲ ಋಣಾತ್ಮಕ ಮಾತು–ಟೀಕೆಗಳಿಗೂ ಈ ಚಿತ್ರವೇ ಉತ್ತರ ನೀಡಲಿದೆ’ ಎಂದರು ವೆಂಕಟ್. ರೌಡಿಸಂನಿಂದ ದೂರಾಗುವ ಮತ್ತು ತಾಯಿ ಪ್ರೀತಿಯನ್ನು ಸಾರುವ ಅಂಶಗಳು ಚಿತ್ರದಲ್ಲಿವೆ. ನಾಯಕಿಯರ ಆಯ್ಕೆ ಇನ್ನೂ ಆಗಬೇಕಿದೆ. ರಮೇಶ್ ಭಟ್, ಕೀರ್ತಿ ರಾಜ್, ಸುದರ್ಶನ್ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರವನ್ನು ವರ್ಷದ ಕೊನೆಯಲ್ಲಿ ತೆರೆಗೆ ತರುವ ಚಿಂತನೆ ನಿರ್ದೇಶಕ ವೆಂಕಟ್ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.