ADVERTISEMENT

ಪ್ರತಿಭಾ ಪ್ರಭೆಯ ನೆಚ್ಚಿಕೊಂಡು

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಚಿತ್ರರಂಗಕ್ಕೆ ಹೇಗೆ ಬಂದಿರಿ?
ಚಿಕ್ಕಂದಿನಿಂದಲೂ ಸಿನಿಮಾಗಳ ಬಗ್ಗೆ ಆಕರ್ಷಣೆ ಇತ್ತು. ಜತೆಗೆ ತಂದೆ ತಾಯಿಗಳ ಪ್ರೋತ್ಸಾಹವೂ ಇತ್ತು. ಹೀಗಾಗಿ ಸಹಜವಾಗಿಯೇ ಚಲನಚಿತ್ರಗಳತ್ತ ಒಲವು ಮೂಡಿತು. `ಪೊಲೀಸ್ ಸ್ಟೋರಿ 3~ ಚಿತ್ರ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

ಎಂಥ ಪಾತ್ರಗಳನ್ನು ಬಯಸುತ್ತೀರಿ?
`ಹ್ಯಾಪಿ~ ಚಿತ್ರದಲ್ಲಿ ಜೆನಿಲಿಯಾ ಅವರಿಗೆ ದೊರೆತಂತಹ ಪಾತ್ರ ಸಿಗಬೇಕು. ಪಾತ್ರದಲ್ಲಿ ಸ್ವಾಭಾವಿಕತೆ ಇರಬೇಕು. ಹೆಚ್ಚು ಸತ್ವಯುತವಾಗಿ ಪಾತ್ರ ಇರಬೇಕು. ಸಾಂಪ್ರದಾಯಿಕ ಶೈಲಿಯ ಪಾತ್ರಗಳಾದರೂ ಓಕೆ.

ಗ್ಲಾಮರ್ ಇಷ್ಟ ಪಡುತ್ತೀರಾ?
ಖಂಡಿತ. ಆದರೆ ಗ್ಲಾಮರ್ ಎನ್ನುವುದು ನಟನೆಯಲ್ಲಿ, ಪ್ರತಿಭೆಯಲ್ಲಿ ಇರಬೇಕು. ಕೇವಲ ಉಡುಗೆಗಳಲ್ಲಿ ಇರಬಾರದು. ಆದರೂ ಪಾತ್ರಗಳಿಗೆ ತಕ್ಕ ಪೋಷಾಕು ಧರಿಸಲು ಸಿದ್ಧ.

ನಿಮ್ಮ ರೋಲ್ ಮಾಡೆಲ್ ಯಾರು?
ಯಾರನ್ನೂ ನಾನು ಹಿಂಬಾಲಿಸಬಾರದು, ನಾನೇ ಇತರರಿಗೆ ಮಾದರಿಯಾಗಿರಬೇಕು ಎಂದು ನಂಬಿದವಳು. ಪುನೀತ್, ದರ್ಶನ್, ಹಿರಿಯ ನಟಿ ಲಕ್ಷ್ಮಿ, ನಟಿ ರಮ್ಯ ನನಗಿಷ್ಟ. ಇವರೆಲ್ಲರನ್ನೂ ಮೆಚ್ಚುತ್ತೇನೆ. ಆದರೆ ಅನುಕರಿಸಲಾರೆ.

ಚಿತ್ರರಂಗದಲ್ಲಿ ನಟಿಯರ ಬಗೆಗೆ ಇರುವ ಧೋರಣೆ ಎಂತಹುದು?
ಅದು ಬ್ಯಾನರ್, ಪ್ರೊಡಕ್ಷನ್ ಹಾಗೂ ಪಾತ್ರಗಳ ಮೇಲೆ ಅವಲಂಬಿತವಾಗಿರುತ್ತದೆ. ಚಿತ್ರ ನಿರ್ಮಾಣ ಎನ್ನುವುದು ಒಂದು ಸಮೂಹ ಕಾರ್ಯ. ಎಲ್ಲವನ್ನೂ ಒಬ್ಬರೇ ನಿರ್ಧರಿಸಲು ಆಗದು. ಈಗಿನ ಸ್ಥಿತಿ ಚೆನ್ನಾಗಿದೆ.

ಅವಕಾಶಗಳು ಹೇಗಿವೆ?
ಉತ್ತಮ ಅವಕಾಶಗಳು ಲಭಿಸುತ್ತಿವೆ. `ವೈದೇಹಿ~ ನಾನು ಅಭಿನಯಿಸುತ್ತಿರುವ ಕನ್ನಡ ಚಿತ್ರ. ನವೀನ್ ಕೃಷ್ಣ, ನಿತಿನ್ ಜತೆ ಅಭಿನಯಿಸುತ್ತಿದ್ದೇನೆ. `ಮಳ್ಳಿ~ ಕನ್ನಡ, ತಮಿಳು ಎರಡರಲ್ಲೂ ತಯಾರಾಗುತ್ತಿದೆ. ಬೇರೊಂದು ಚಿತ್ರದಲ್ಲಿ ಅಭಿನಯಿಸುವ ಕೋರಿಕೆ ಬಂದಿತ್ತು. ಸದ್ಯಕ್ಕೆ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿರುವುದರಿಂದ ಒಲ್ಲೆ ಎಂದಿದ್ದೇನೆ.

ಕನ್ನಡ ಚಿತ್ರರಂಗಕ್ಕೂ ಪರಭಾಷಾ ಚಿತ್ರರಂಗಗಳಿಗೂ ಇರುವ ಪ್ರಮುಖ ವ್ಯತ್ಯಾಸವೇನು?
ರಿಮೇಕ್ ಮಾಡುತ್ತಾರೆ ಎನ್ನುವುದೊಂದೇ ಕನ್ನಡದ ನೆಗೆಟಿವ್ ಅಂಶ. ನಮ್ಮನ್ನು ಅನುಸರಿಸಿ ಬೇರೆಯವರು ಚಿತ್ರ ನಿರ್ಮಿಸಬೇಕು. ಅಂತಹ ಚಿತ್ರಗಳು ಕನ್ನಡದಲ್ಲಿ ನಿರ್ಮಾಣವಾಗಬೇಕು.

ಭವಿಷ್ಯದ ಬಗ್ಗೆ ನಿಮ್ಮ ಚಿಂತನೆ...
ಈಗ ಪ್ರಥಮ ವರ್ಷದ ಬಿಸಿಎ ಓದುತ್ತಿದ್ದೇನೆ. ಮುಂದೆ ಸ್ನಾತಕೋತ್ತರ ಪದವಿ ಪಡೆಯಬೇಕು ಎಂಬ ಬಯಕೆ ಇದೆ. ಆ ನಂತರ ಸರ್ಕಾರಿ ಉದ್ಯೋಗ ಹಿಡಿಯಬೇಕು.

ಹಾಗಾದರೆ ಚಿತ್ರರಂಗದಲ್ಲಿ ಉಳಿಯುವ ಆಸೆ ಇಲ್ಲವೇ?
ಖಂಡಿತ ಇದೆ. ವೃತ್ತಿಯೇ ಬೇರೆ ಪ್ರವೃತ್ತಿಯೇ ಬೇರೆ. ಮುಂದೇನಾಗುತ್ತದೆ ಯಾರಿಗೂ ತಿಳಿಯದಲ್ಲ, ನೋಡೋಣ.

ಇತರೆ ಹವ್ಯಾಸಗಳು...
ನಾನು ವಾಲಿಬಾಲ್ ಆಟಗಾರ್ತಿ. ಎಂಟನೇ ತರಗತಿಯಲ್ಲಿ ಓದುತ್ತಿರುವಾಗ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ್ದೆ. ಅಲ್ಲದೆ ಟೇಬಲ್ ಟೆನ್ನಿಸ್ ಕೂಡ ಆಡುತ್ತೇನೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲಿನಿಂದಲೂ ಪಾಲ್ಗೊಳ್ಳುತ್ತಿದ್ದೆ.

ಮದುವೆ?
ಆ ಬಗ್ಗೆ ಇನ್ನೂ ಯೋಚಿಸಿಲ್ಲ. ಓದು ಮತ್ತು ನಟನೆ ಮುಖ್ಯ. ಈಗಲೇ ಮದುವೆ ಬಗ್ಗೆ ಯೋಚಿಸುವ ವಯಸ್ಸೂ ನನ್ನದಲ್ಲ. ಅಪ್ಪ ಅಮ್ಮನೇ ಅದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.