ADVERTISEMENT

ಪ್ರಿಯಾ ಯುಗಳ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2010, 11:00 IST
Last Updated 30 ಡಿಸೆಂಬರ್ 2010, 11:00 IST
ಪ್ರಿಯಾ ಯುಗಳ
ಪ್ರಿಯಾ ಯುಗಳ   

ಬಿಂದಾಸ್ ಹುಡುಗಿ ಗೆದ್ದಿದೆ. ಬಿಂದಾಸ್ ಹುಡುಗಿ ಐವತ್ತು ದಿನ ಪೂರೈಸಿದೆ. ನೂರು ದಿನ ಪೂರೈಸುವ ವಿಶ್ವಾಸವಿದೆ. ಮತ್ತೆರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿರುವೆ. -ಹೀಗೆ ನಾಲ್ಕು ಮಾತುಗಳಲ್ಲಿ ಪ್ರಿಯಾ ಹಾಸನ್‌ರ ಹೊಸ ವರ್ಷದ ಸಂತಸ-ಸಂಕಲ್ಪಗಳನ್ನು ಪಟ್ಟಿಮಾಡಿಬಿಡಬಹುದು. ಆದರೆ, ಅವರ ಉತ್ಸಾಹ ಚೌಕಟ್ಟುಗಳಿಗೆ ಸಿಗದಷ್ಟು ಚಲನಶೀಲವಾದುದು.ಪ್ರಿಯಾ ಮಾತು ಆರಂಭವಾದುದು ಗಾಂಧಿನಗರದ ತಾರತಮ್ಯ ನಡವಳಿಕೆಯ ನಡುವೆಯೂ ‘ಬಿಂದಾಸ್ ಹುಡುಗಿ’ ಐವತ್ತು ದಿನಗಳನ್ನು ಪೂರೈಸಿದೆ ಎನ್ನುವ ಸಂತಸದೊಂದಿಗೆ.

ಮಾತು ಮುಂದುವರಿದದ್ದು ಹೊಸ ಅವಕಾಶಗಳ ಬಗ್ಗೆ. ಮೊದಲನೆಯ ಚಿತ್ರ ಎ.ಗಣೇಶ್ ನಿರ್ಮಿಸುತ್ತಿರುವ ‘ರೆಬೆಲ್’. ಧನುರ್ಮಾಸ ಮುಗಿಯಲು ಕಾಯುತ್ತಿರುವ ಗಣೇಶ್, ಜನವರಿಯಲ್ಲಿ ‘ರೆಬೆಲ್’ ಆರಂಭಿಸುತ್ತಾರಂತೆ. ಪ್ರಿಯಾ ಒಪ್ಪಿಕೊಂಡಿರುವ ಇನ್ನೊಂದು ಚಿತ್ರ ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರ ನಿರ್ಮಾಣದ್ದು. ಈ ಎರಡೂ ಚಿತ್ರಗಳೂ ಎಂದಿನಂತೆ ನಾಯಕಿ ಪ್ರಧಾನ, ಸಾಹಸ ಪ್ರಧಾನ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.