ADVERTISEMENT

ಯಶ್ ನಿವೃತ್ತಿ?

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕ ಯಶ್ ಚೋಪ್ರಾ ನಿರ್ದೇಶನದಿಂದ ಹಿಂದೆ ಸರಿಯುವ ಮಾತನ್ನಾಡಿದ್ದಾರೆ. ಈಚೆಗೆ 80ರ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅವರು, `ಸಿನಿಮಾ ನನಗೆ ತೃಪ್ತಿ, ಸಂತೋಷ ಎರಡನ್ನೂ ನೀಡಿದೆ. ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿ ಪಡೆದಿರುವೆ. ಇದೀಗ ಹಿಂದೆ ಸರಿಯುವ ಕಾಲ ಬಂದಿದೆ.

ಇನ್ನು ಮುಂದೆ ನನ್ನ ಪತ್ನಿಯ ದೂರುಗಳನ್ನು ನಿವಾರಿಸುತ್ತಾ ಅವಳ ಆಸೆಗಳನ್ನು ಈಡೇರಿಸುವೆ. ಹೊಸ ತಂತ್ರಜ್ಞರಿಗೆ, ನಿರ್ದೇಶಕರಿಗೆ, ನಟರಿಗೆ ನನ್ನಿಂದಾದ ಸಹಾಯ ಮಾಡುವೆ~ ಎಂದಿದ್ದಾರೆ.

ಶಾರುಖ್ ಖಾನ್, ಕತ್ರೀನಾ ಕೈಫ್, ಅನುಷ್ಕಾ ಶರ್ಮಾ ನಟಿಸುತ್ತಿರುವ `ಜಬ್ ತಕ್ ಹೇ ಜಾನ್~ ಅವರ ನಿರ್ದೇಶನದ ಕೊನೆಯ ಸಿನಿಮಾ ಎಂಬುದು ಅವರ ಮಾತಿನಲ್ಲಿ ವ್ಯಕ್ತವಾಗಿದೆ. `ಸಿಲ್‌ಸಿಲಾ~, `ದೀವಾರ್~, `ಕಭಿ ಕಭೀ~, `ಜೋಶಿಲಾ~, `ಡರ್~, `ಚಾಂದನಿ~, `ದಿಲ್ ತೊ ಪಾಗಲ್ ಹೇ~, `ವೀರ್ ಝಾರಾ~ ಹೀಗೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟ ಯಶ್, ವಯೋಸಹಜ ಮಾತುಗಳನ್ನು ಆಡುತ್ತಿದ್ದಾರೆ ಎನ್ನುತ್ತಿದೆ ಬಾಲಿವುಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.