ADVERTISEMENT

ರೋಮಿಯೋಗೆ ಹಾಡು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:35 IST
Last Updated 8 ಸೆಪ್ಟೆಂಬರ್ 2011, 19:35 IST

ಗಣೇಶ್ ನಾಯಕರಾಗಿ ಅಭಿನಯಿಸುತ್ತಿರುವ `ರೋಮಿಯೋ~ ಚಿತ್ರದ ಹಾಡಿನ ಚಿತ್ರೀಕರಣ ತಾವರೆಕೆರೆಯಲ್ಲಿ ನಡೆಯಿತು. `ಸ್ವಲ್ಪ ಫೈನಾನ್ಸು ಸ್ವಲ್ಪ ರೊಮ್ಯಾನ್ಸು ಇದ್ರೆ ಸಾಕಂತೆ ಅವನೇ ರೋಮಿಯೋ~ ಎಂಬ ವಿ.ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿಗೆ ಗಣೇಶ್ ಮತ್ತು ಸಹಕಲಾವಿದರು ಹೆಜ್ಜೆ ಹಾಕಿದರು. ಚಿತ್ರಕ್ಕೆ ಚಿತ್ರಕಥೆ ಮತ್ತು ನಿರ್ದೇಶನ ಪಿ.ಸಿ.ಶೇಖರ್. ನಟರಾಜ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಬಾಬಾ ಭಾಸ್ಕರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ನಾಯಕಿ ಭಾವನಾ (ಜಾಕಿ). ರಂಗಾಯಣ ರಘು, ಸಾಧುಕೋಕಿಲಾ, ಸಿಹಿಕಹಿ ಚಂದ್ರು, ಸುಧಾಬೆಳವಾಡಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.