ADVERTISEMENT

ಸೋನಾಕ್ಷಿಗೆ ಅಮ್ಮನ ಶಹಬ್ಬಾಸ್‌ಗಿರಿ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 19:59 IST
Last Updated 3 ಜುಲೈ 2013, 19:59 IST

`ಲೂಟೇರಾ' ಚಿತ್ರದಲ್ಲಿ ಮಗಳ ಅಭಿನಯ ಕೌಶಲ ಕಂಡು ಪೂನಂ ಸಿನ್ಹ ಆನಂದತುಂದಿಲರಾಗಿದ್ದಾರೆ. `ಸೋನಾಕ್ಷಿಗೆ ಇನ್ನು ಅವರಪ್ಪ ಶತ್ರುಘ್ನ ಸಿನ್ಹ ಕೂಡ ಕಿವಿಮಾತು ಹೇಳಲು ಹಿಂದುಮುಂದು ನೋಡಬೇಕು, ಹಾಗಿದೆ ಅವಳ ಅಭಿನಯ' ಎಂದು ಬಾಯಿತುಂಬಾ ಹೊಗಳಿದ್ದಾರೆ.

ಜುಲೈ 5ರಂದು ತೆರೆಕಾಣಲಿರುವ `ಲೂಟೇರಾ'  1950ರ ದಶಕದ ಪ್ರೇಮಕತೆಯನ್ನು ಒಳಗೊಂಡ ಚಿತ್ರ. ವಿಕ್ರಮಾದಿತ್ಯ ಮೋಟ್ವಾನೆ ಚಿತ್ರದ ನಿರ್ದೇಶಕ. ಸೋನಾಕ್ಷಿ ಸಿನ್ಹ ಅವರಿಗೆ ಜೋಡಿಯಾಗಿ ರಣವೀರ್ ಸಿಂಗ್ ಅಭಿನಯಿಸಿದ್ದಾರೆ.

`ಇದುವರೆಗೆ ಮಗಳು ನಟಿಯಾಗಿ ಬೆಳೆಯಬೇಕು ಎಂದು ಅನೇಕ ಸಲ ಅವಳಿಗೆ ಕಿವಿಮಾತು ಹೇಳುತ್ತಿದ್ದೆ. ಈ ಚಿತ್ರದಲ್ಲಿ ಅವಳ ಅಭಿನಯ ಕಂಡು ನನಗೆ ಮಾತೇ ಹೊರಡದಂತಾಯಿತು.

ಇನ್ನು ಅವಳ ಅಪ್ಪ ಕೂಡ ಸಲಹೆ ಕೊಡಲು ಯೋಚಿಸಬೇಕು' ಎಂದು ಪೂನಂ ಹೆಮ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ. ರಣವೀರ್ ಸಿಂಗ್ ನಟನೆಯ ಕುರಿತೂ ಅವರ ಮಾತಿನಲ್ಲಿ ಮೆಚ್ಚುಗೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT