ADVERTISEMENT

ಸೋನಾಕ್ಷಿ ಈಸ್ ಬೆಸ್ಟ್!

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

`ಲೂಟೆರಾ' ಚಿತ್ರದಲ್ಲಿ ಮಗಳು ಸೋನಾಕ್ಷಿ ಸಿನ್ಹಾ ನಟನೆಯನ್ನು ನೋಡಿದ ಶತ್ರುಘ್ನ ಸಿನ್ಹಾ ಮೂಕವಿಸ್ಮಿತರಾಗಿದ್ದಾರಂತೆ. ಇದೇ ವೇಳೆ `ಈಸ್ಟ್ ಆರ್ ವೆಸ್ಟ್ ಸೋನಾಕ್ಷಿ ಈಸ್ ಬೆಸ್ಟ್!' ಅನ್ನುವ ಅಭಿಮಾನದ ಬಿರುದನ್ನೂ ಆಕೆಗೆ ನೀಡಿದ್ದಾರೆ. ಅಲ್ಲದೆ ಮುಂದೆ ತಮ್ಮ ಮಗಳಿಂದ ನಟನೆಯ ಪಾಠ ಹೇಳಿಸಿಕೊಳ್ಳುವ ಕುರಿತು ಯೋಚನೆ ಮಾಡಿದ್ದಾರಂತೆ.

“ಲೂಟೆರಾ ಚಿತ್ರದಲ್ಲಿ ಸೋನಾಕ್ಷಿ ಅದ್ಭುತವಾಗಿ ನಟಿಸಿದ್ದಾರೆ. ಅಭಿನಯದಲ್ಲಿ ಸಾಕಷ್ಟು ಪಳಗಿದ್ದಾಳೆ. ಆಕೆ ತೆರೆಯ ಮೇಲೆ ತನ್ನ ನಟನೆಯ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ರೀತಿ ಅದ್ಭುತ. ಸೋನಾಕ್ಷಿ ಅಭಿನಯದ ಗುಟ್ಟನ್ನು ನಾನು ತಿಳಿದುಕೊಳ್ಳಬೇಕು. ಹಾಗೆಯೇ, ಆಕೆಯಿಂದ ನಾನು ನಟನೆಯ ಪಾಠ ಹೇಳಿಸಿಕೊಳ್ಳಬೇಕು ಅಂತ ಅನಿಸಿದೆ' ಎಂದು ಸೋನಾಕ್ಷಿಯ ಮೇಲೆ ಹೊಗಳಿಕೆಯ ವರ್ಷಧಾರೆ ಸುರಿಸಿದ್ದಾರೆ ಹಿರಿಯ ನಟ ಶತ್ರುಘ್ನ ಸಿನ್ಹಾ.

ಅಂದಹಾಗೆ, ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ ಬಗ್ಗೆ ಈ ಪರಿ ಹೊಗಳಿದ್ದು `ಲೂಟೆರಾ' ಚಿತ್ರದ ಸಂತೋಷ ಕೂಟದಲ್ಲಿ. ಈ ಕೂಟದಲ್ಲಿ `ಲೂಟೆರಾ' ಚಿತ್ರದ ಇಡೀ ತಂಡ ಭಾಗವಹಿಸಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.