ADVERTISEMENT

18ಕ್ಕೆ ಲೀಡರ್‌ ಚಿತ್ರ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 13:35 IST
Last Updated 16 ಆಗಸ್ಟ್ 2016, 13:35 IST
18ಕ್ಕೆ ಲೀಡರ್‌ ಚಿತ್ರ ಮುಹೂರ್ತ
18ಕ್ಕೆ ಲೀಡರ್‌ ಚಿತ್ರ ಮುಹೂರ್ತ   

ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಛನದಲ್ಲಿ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಸೇರಿ ನಿರ್ಮಿಸುತ್ತಿರುವ ಚಿತ್ರ ‘ಲೀಡರ್’. ಇದರಲ್ಲಿ ಶಿವರಾಜ ಕುಮಾರ್ ನಾಯಕ ನಟರಾಗಿ ಅಭಿನಯಿಸಲಿದ್ದಾರೆ.

ಆಗಸ್ಟ್ 18ರಂದು ಲೀಡರ್‌ ಸಿನಿಮಾದ ಮುಹೂರ್ತ ನೆರವೇರಲಿದೆ. ಅಂದಹಾಗೆ ಈ ಚಿತ್ರದಲ್ಲಿ ನಟಿ ದೀಪಿಕಾ ಕಾಮಯ್ಯ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಲೀಡರ್ ಸಿನಿಮಾದ ಕಥೆಗೆ ಮತ್ತೊಂದು ಆಯಾಮ ನೀಡಬಲ್ಲ ಈ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಎಂದು ಚಿತ್ರತಂಡ ಸತತ ಹುಡುಕಾಟ ನಡೆಸಿತ್ತು. ಕಡೆಗೆ ದೀಪಿಕಾ ಕಾಮಯ್ಯ ಆಯ್ಕೆಯಾಗುವ ಮೂಲಕ ಪತ್ರಕರ್ತೆ ಪಾತ್ರ ಮತ್ತಷ್ಟು ಗಟ್ಟಿಗೊಂಡಂತಾಗಿದೆ.

‘ರೋಸ್’ ಚಿತ್ರ ಖ್ಯಾತಿಯ ಸಹನಾ ಮೂರ್ತಿ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಾಯಕರಾಗಿ ನಟಿಸುತ್ತಿರುವ ‘ಲೀಡರ್’ ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳಗೆರೆ ಪುತ್ರಿ ಪುಟಾಣಿ ಪರಿಣಿತ ಕೂಡ ಅಭಿನಯಿಸುತ್ತಿದ್ದಾಳೆ. ಶಿವರಾಜಕುಮಾರ್ ಮಗಳ ಪಾತ್ರದಲ್ಲಿ ಪರಿಣಿತ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಚಿತ್ರದಲ್ಲಿ ಶಿವರಾಜ ಕುಮಾರ್ ಅವರ ಜೊತೆಗೆ ವಿಜಯ ರಾಘವೇಂದ್ರ, ಜಗ್ಗೇಶ್ ತಾರಾಗಣದಲ್ಲಿರಲಿದ್ದಾರೆ. ಪ್ರಣೀತಾ ಚಿತ್ರದ ನಾಯಕಿ. ಲೂಸ್‌ಮಾದ ಯೋಗಿ,  ಪ್ರಕಾಶ್ ಬೆಳವಾಡಿ ಕೂಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ವೀರ ಸಮರ್ಥ್ ಸಂಗೀತ, ಗುರುಪ್ರಶಾಂತ್ ರೈ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.