ಹಾಲಿವುಡ್: ಬಹುನಿರೀಕ್ಷಿತ ಅವತಾರ್ ಸಿನಿಮಾದ ಎರಡನೇ ಭಾಗದ ಬಿಡುಗಡೆ ದಿನಾಂಕ ನಿಗದಿಯಾಗಿದೆ. 2020ಕ್ಕೆ ಅವತಾರ್ 2 ತೆರೆಕಾಣಲಿದೆ.
ಚಿತ್ರದ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ನಿರ್ದೇಶಕ ಕ್ಯಾಮೆರಾನ್ ಹಾಗೂ ಅವರ ಜತೆ ಕಾರ್ಯನಿರ್ವಹಿಸುತ್ತಿರುವ ಚಿತ್ರತಂಡದ ಫೋಟೋ ಪ್ರಕಟಿಸಲಾಗಿದೆ. ಇದರೊಂದಿಗೆ ಅವತಾರ್ ಚಿತ್ರದ 2, 3, 4 ಹಾಗೂ 5ನೇ ಭಾಗದ ಬಿಡುಗಡೆ ದಿನಾಂಕ ಪ್ರಕಟಿಸಿದೆ.
ಪಂಡೋರಾದ ನೀಲಿ ಮೈಬಣ್ಣದ ನಾವಿಗಳು ಹಾಗೂ ಮನುಷ್ಯರ ನಡುವಿನ ಘರ್ಷಣೆಯ ಕಥಾವಸ್ತು ಹೊಂದಿರುವ ಅವತಾರ್ ಸಿನಿಮಾ 2009ರಲ್ಲಿ ತೆರೆಕಂಡು ಅಂದಾಜು ₹17 ಸಾವಿರ ಕೋಟಿ(2.7 ಬಿಲಿಯನ್ ಡಾಲರ್) ಸಂಗ್ರಹಿಸಿತ್ತು.
ಅವತಾರ್ ಸರಣಿ ಬಿಡುಗಡೆ ದಿನಾಂಕ:
* ಅವತಾರ್ 2– 2020, ಡಿಸೆಂಬರ್ 18
* ಅವತಾರ್ 3– 2021, ಡಿಸೆಂಬರ್ 17
* ಅವತಾರ್ 4– 2024, ಡಿಸೆಂಬರ್ 20
* ಅವತಾರ್ 5– 2025, ಡಿಸೆಂಬರ್ 19
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.